ಐಪಿಎಲ್ 2021 | ದುಬೈನಲ್ಲಿ ಆರ್ ಸಿಬಿ- ಎಸ್ ಆರ್ ಹೆಚ್ ದಂಗಾಲ್

1 min read
RCB vs SRH saaksha tv

ಆರ್​ಸಿಬಿ ಪ್ಲೇ-ಆಫ್​​ನಲ್ಲಿ ಸ್ಥಾನ ಗಟ್ಟಿಮಾಡಿಕೊಂಡಿದೆ. ಆದರೆ ಕ್ವಾಲಿಫೈಯರ್​​ನಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಬೇಕಾದರೆ ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲ, ಸಿಎಸ್​​ಕೆ ಕೊನೆಯ ಪಂದ್ಯವನ್ನು ಸೋಲಬೇಕು. ಕ್ವಾಲಿಫೈಯರ್​​ ಲೆಕ್ಕಾಚಾರದಲ್ಲಿ ಆರ್​​ಸಿಬಿಗೆ ಸನ್​​ರೈಸರ್ಸ್​ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ. ಸನ್​​ರೈಸರ್ಸ್​ಗೆ ಮರ್ಯಾದೆ ಉಳಿಸಿಕೊಳ್ಳಲು ಇರುವ ಪಂದ್ಯ ಇದಾಗಿದೆ.

ಆರ್​​ಸಿಬಿ ಬ್ಯಾಟಿಂಗ್​​ ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗುತ್ತಿದೆ. ವಿರಾಟ್​​​, ದೇವದತ್​​ ಮತ್ತು ಮ್ಯಾಕ್ಸ್​​ವೆಲ್​​ ರನ್​​ಬೇಟೆಯಲ್ಲಿದ್ದಾರೆ. ಎಬಿಡಿ ಬ್ಯಾಟ್​ ಕೂಡ ಮಾತನಾಡುತ್ತಿದೆ. ಬೌಲಿಂಗ್​​ನಲ್ಲಿ ಹರ್ಷಲ್​​ ಪಟೇಲ್​​ ಪರ್ಪಲ್​​ ಕ್ಯಾಪ್​​ ತೊಟ್ಟುಕೊಂಡಿದ್ದಾರೆ. ಚಹಲ್​​ ಲೆಗ್​​ಸ್ಪಿನ್​ ಮೋಡಿ ಮಾಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್​​ಸಿಬಿ ಗೆಲುವಿನ ಲಯದಲ್ಲಿದೆ.

RCB vs SRH saaksha tv

ಹೈದ್ರಾಬಾದ್​​ ವಿಷಯ ಮಾತನಾಡಿದ್ರೆ ಕೇವಲ ವೈಫಲ್ಯವೇ ಕಣ್ಣಮುಂದೆ ಬರುತ್ತದೆ. ಸೀಸನ್​​ ಮುಗಿದರೆ ಸಾಕು ಅನ್ನುವ ಹಾಗಾಗಿದೆ. ಬ್ಯಾಟಿಂಗ್​​ನಲ್ಲಿ ಕಂಡಿರುವ ವೈಫಲ್ಯ ಬೌಲರ್​​ಗಳ ಮೇಲೆ ಒತ್ತಡ ಹೇರುತ್ತದೆ. ರಶೀದ್​​ ಖಾನ್​​ರಿಂದ ಹಿಡಿದು ಭುವನೇಶ್ವರ್​​ ಕುಮಾರ್​​ ತನಕ ಯಾರೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ.  ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಿಚ್​ ಮೇಲೂ ಒಂದು ಕಣ್ಣಿದೆ.  ಒಟ್ಟಿನಲ್ಲಿ ಆರ್​​ಸಿಬಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದರೆ, ಸನ್​​ರೈಸರ್ಸ್​ ಮಾನ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿಯಲಿದೆ.

ಸಂಭಾವ್ಯ  XI

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು

  1. ವಿರಾಟ್​​ ಕೊಹ್ಲಿ, 2. ದೇವದತ್​​ ಪಡಿಕಲ್​​, 3. ಶ್ರೀಕರ್​​ ಭರತ್​, 4. ಗ್ಲೆನ್​ ​ಮ್ಯಾಕ್ಸ್​​ವೆಲ್, 5. ಎಬಿ ಡಿ ವಿಲಿಯರ್ಸ್​, 6. ಡ್ಯಾನ್​​ ಕ್ರಿಶ್ಚಿಯನ್​​, 7. ಶಹಬಾಝ್​ ಅಹ್ಮದ್​​, 8. ಜಾರ್ಜ್​ ಗಾರ್ಟನ್​​, 9. ಹರ್ಷಲ್​ ಪಟೇಲ್​​, 10. ಯುಜ್ವೇಂದ್ರ ಚಹಲ್​​, 11. ಮೊಹಮ್ಮದ್​​ ಸಿರಾಜ್​​​​

ಸನ್​​ರೈಸರ್ಸ್​ ಹೈದ್ರಾಬಾದ್​​

  1. ಜೇಸನ್​​ ರಾಯ್​​​, 2.ವೃದ್ಧಿಮಾನ್​​ ಸಾಹಾ, 3.ಕೇನ್​​ ವಿಲಿಯಮ್ಸನ್​​, 4. ಪ್ರಿಯಮ್​​ ಗರ್ಗ್​, 5. ಅಭಿಷೇಕ್​​ ಶರ್ಮಾ, 6. ಅಬ್ದುಲ್​​ ಸಮದ್​​, 7. ಜೇಸನ್​​ ಹೋಲ್ಡರ್​​, 8. ರಶೀದ್​​ ಖಾನ್​​, 9. ಭುವನೇಶ್ವರ್​​ ಕುಮಾರ್​​, 10. ಸಿದ್ಧಾರ್ಥ್​ ಕೌಲ್​​​, 11. ಉಮ್ರನ್​​ ಮಲಿಕ್​​

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd