RCB vs UPW : RCB ಗೆ ಸತತ 4ನೇ ಸೋಲು….!!
ಆರಂಭಿಕ ಬ್ಯಾಟರ್ಗಳಾದ ಎಲೆಸ್ಸಾ ಹೇಲಿ(96*) ಸ್ಪೋಟಕ ಬ್ಯಾಟಿಂಗ್ ಹಾಗೂ ದೇವಿಕಾ ವೈದ್ಯ(36*) ಜವಾಬ್ದಾರಿಯ ಆಟದಿಂದ ವುಮೆನ್ಸ್ ಪ್ರೀಮಿಯರ್ ಲೀಗ್ 2023 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಬ್ಯಾಟರ್ಗಳ ವೈಫಲ್ಯಕ್ಕೆ ಸಿಲುಕಿತು. ಪರಿಣಾಮ 19.3 ಓವರ್ಗಳಲ್ಲಿ 138 ರನ್ಗಳಿಗೆ ಸರ್ವಪತನ ಕಂಡಿತು.
ಈ ಟಾರ್ಗೆಟ್ ಬೆನ್ನತ್ತಿದ ಯುಪಿ ವಾರಿಯರ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೇ ಕೇವಲ 13 ಓವರ್ನಲ್ಲಿ 139 ರನ್ಗಳಿಸಿ 10 ವಿಕೆಟ್ಗಳಿಂದ ಗೆದ್ದುಬೀಗಿದರೆ. ಆರ್ಸಿಬಿ ಸತತ 4ನೇ ಸೋಲಿನ ನಿರಾಸೆ ಅನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ನಾಯಕಿ ಸ್ಮೃತಿ ಮಂದಾನ(4) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಆದರೆ ನಂತರ ಜೊತೆಯಾದ ಸೂಫಿ ಡಿವೈನ್(36) ಹಾಗೂ ಎಲಿಸ್ಸಾ ಪೆರ್ರಿ(52) ಉತ್ತಮ ಬ್ಯಾಟಿಂಗ್ನಿಂದ ತಂಡಕ್ಕೆ ಚೇತರಿಕೆ ನೀಡಿದರು.
ಆದರೆ ಇವರಿಬ್ಬರು ಔಟಾದ ನಂತರದಲ್ಲಿ ಬಂದ ಯಾವುದೇ ಬ್ಯಾಟರ್ಗಳು ತಂಡಕ್ಕೆ ಆಸರೆ ಆಗಲಿಲ್ಲ. ಪರಿಣಾಮ 19.3 ಓವರ್ಗಳಲ್ಲಿ 138 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನ ಕಳೆದುಕೊಂಡಿತು. ಯುಪಿ ಪರ ಎಕ್ಲೆಸ್ಟೋನ್ 4 ವಿಕೆಟ್ ಪಡೆದು ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ದೀಪ್ತಿ ಶರ್ಮ 3 ಹಾಗೂ ಗಾಯಕ್ವಾಡ್ 1 ವಿಕೆಟ್ ಪಡೆದರು.
ಆರ್ಸಿಬಿ ನೀಡಿದ 139 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ದೇವಿಕಾ ವೈದ್ಯ(36*) ಹಾಗೂ ಎಲೆಸ್ಸಾ ಹೇಲಿ(96) ಆರ್ಸಿಬಿ ಬೌಲರ್ಗಳ ಮೇಲೆ ಪ್ರಾಬಲ್ಯ ಮೆರೆದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಎಲೆಸ್ಸಾ ಹೇಲಿ, ಕೇವಲ 47 ಬಾಲ್ಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸ್ ನೆರವಿನಿಂದ 96* ರನ್ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್ ಆಡಿರುವ 3 ಪಂದ್ಯಗಳಲ್ಲಿ ತನ್ನ 2ನೇ ಗೆಲುವು ಸಾಧಿಸಿದರೆ. ಆರ್ಸಿಬಿ ಸತತ 4ನೇ ಸೋಲಿನ ಆಘಾತ ಕಾಣುವ ಮೂಲಕ ನಿರಾಸೆ ಅನುಭವಿಸಿತು. ಸ್ಪೋಟಕ ಬ್ಯಾಟಿಂಗ್ನಿಂದ ಯುಪಿ ಗೆಲುವಿನಲ್ಲಿ ಮಿಂಚಿದ ಎಲೆಸ್ಸಾ ಹೇಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
RCB vs UPW : 4th consecutive defeat for RCB…!!