RCB | ಗಿಲ್ ವಿಚಾರದಲ್ಲಿ ಆರ್ ಸಿಬಿ ಎಡವಟ್ಟು
ಟೀಂ ಇಂಡಿಯಾದ ಯುವ ಬ್ಯಾಟರ್ ಶುಭ್ ಮನ್ ಗಿಲ್ ವಿಷಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಯಡವಟ್ಟು ಮಾಡಿಕೊಂಡಿದ್ದು, ತಪ್ಪು ಟ್ವೀಟ್ ಮಾಡಿ ಟ್ರೋಲ್ ಆಗುತ್ತಿದೆ.
ಬುಧವಾರ ವೆಸ್ಟ್ ಇಂಡೀಸ್ ಜೊತೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ 98 ಎಸೆತಗಳನ್ನು ಎದುರಿಸಿ ನೂರರ ಸ್ಟ್ರೈಕ್ ರೇಟ್ ನಲ್ಲಿ ಏಳು ಬೌಂಡರಿ, ಎರಡು ಸಿಕ್ಸರ್ ಗಳ ಸಹಾಯದೊಂದಿಗೆ 98 ರನ್ ಗಳಿಸಿ ನಾಟೌಟ್ ಆಗಿ ಉಳಿದ್ರು.
ಪದೇ ಪದೇ ಮಳೆರಾಯ ಅಬ್ಬರಿಸಿದ ಕಾರಣ ಗಿಲ್ ಸೆಂಚೂರಿ ಮಿಸ್ ಆಯ್ತು. ಹೀಗೆ ಕೇವಲ ಎರಡು ರನ್ ಗಳ ಅಂತರದಲ್ಲಿ ಗಿಲ್ ಏಕದಿನ ಮೇಡಿನ್ ಸೆಂಚೂರಿ ಮಿಸ್ ಮಾಡಿಕೊಂಡರು. ಆದ್ರೂ ಮೈದಾನವನ್ನು ಚೆನ್ನಾಗಿ ಬಳಸಿಕೊಂಡ ಗಿಲ್, ಬೌಂಡರಿ ಸಿಕ್ಸರ್ ಗಳೊಂದಿಗೆ ಮಿಂಚಿದ್ರು.
ಗಿಲ್ ಇನ್ನಿಂಗ್ಸ್ ನೋಡಿದ ಇಂಡಿಯನ್ ಪ್ರಿಮಿಯರ್ ಲೀಗ್ ಫ್ರಾಂಚೈಸಿ ಆರ್ ಸಿಬಿ ಅತ್ಯುತ್ಸಾಹದಿಂದ ತಪ್ಪು ಟ್ವೀಟ್ ಮಾಡಿದೆ. ಏಕದಿನ ಕ್ರಿಕೆಟ್ ನಲ್ಲಿ ಚೊಚ್ಚಲ ಸೆಂಚೂರಿ ಬಾರಿಸಿದ ಶುಭ್ ಮನ್ ಗಿಲ್ ಗೆ ಶುಭಾಶಯಗಳು. ಇದು ನಿನ್ನ ಕೆರಿಯರ್ ನಲ್ಲಿ ಒಂದು ಫೇವರೇಟ್ ಇನ್ನಿಂಗ್ಸ್ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ವೀಟ್ ಮಾಡಿತ್ತು.
ಆದ್ರೆ ಟ್ವೀಟ್ ಮಾಡಿದ ಎರಡು ನಿಮಿಷಗಳಿಗೆ ಮತ್ತೆ ಆ ಟ್ವಿಟ್ ಅನ್ನ ಆರ್ ಸಿಬಿ ಡಿಲೀಟ್ ಮಾಡಿತ್ತು. ಅದಾಗ್ಯೂ ಅಲ್ಲಿಗೆ ಆಗಬೇಕಿದ್ದ ನಷ್ಟ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನೆಟ್ಟಿಗರು ಆರ್ ಸಿಬಿ ಟ್ವೀಟ್ ಅನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಫನ್ನಿ ಫನ್ನಿಯಾಗಿ ಟ್ರೋಲ್ ಮಾಡುತ್ತಿದ್ದಾರೆ.
ಆದ್ರೆ ಯಾರೋಬ್ಬರು ಕೂಡ ಆರ್ ಸಿಬಿಯನ್ನ ಹೀಯಾಳಿಸುವಂತೆ ಟ್ರೋಲ್ ಮಾಡಿಲ್ಲ. ಯಾಕೆಂದರೇ ಶುಭ್ ಮನ್ ಗಿಲ್ ಸೆಂಚೂರಿ ಚಾನ್ಸ್ ಮಿಸ್ ಆದ್ರೂ ತನ್ನ ಕೆರಿಯರ್ ನಲ್ಲಿ ಬೆಸ್ಟ್ ಇನ್ನಿಂಗ್ಸ್ ಆಡಿದ್ರು. ಆ ಉತ್ಸಾಹದಲ್ಲಿ ಆರ್ ಸಿಬಿ, ಗಿಲ್ ಸೆಂಚೂರಿ ಮಾಡಿಯೇ ತೀರುತ್ತಾನೆ ಎಂದು ಟ್ವೀಟ್ ಮಾಡಿದೆ. ಆದ್ರೆ ಯಾರಿಗೆ ಗೊತ್ತು.. ಹೀಗೆ ಆಗುತ್ತೆ ಅಂತಾ ನೆಟ್ಟಿಗರು ಬರೆದುಕೊಳ್ಳುತ್ತಿದ್ದಾರೆ.
ಇನ್ನು ಮ್ಯಾಚ್ ವಿಚಾರಕ್ಕೆ ಬಂದರೇ ಮಳೆಯ ಕಾರಣ ಮೂರನೇ ಪಂದ್ಯವನ್ನು 36 ಓವರ್ ಗಳಿಗೆ ಸೀಮಿತ ಮಾಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಗಿಲ್ ಜೊತೆ ಧವನ್ ಕೂಡ ಅರ್ಧಶತಕ ಸಿಡಿಸಿದ್ರು. ಶ್ರೇಯಸ್ ಅಯ್ಯರ್ 44 ರನ್ ಗಳಿಸಿದ್ರು. ಪರಿಣಾಮ ಭಾರತ ತಂಡ 225 ರನ್ ಗಳನ್ನು ಗಳಿಸಿತ್ತು. ಡಕ್ವರ್ಥ್ ಲೂಯಿಸ್ ಪ್ರಕಾರ ವೆಸ್ಟ್ ಇಂಡಿಸ್ ಗೆ 257 ರನ್ ಗಳ ಗುರಿಯನ್ನ ನೀಡಲಾಯ್ತು.
ಈ ಗುರಿ ಬೆನ್ನಟಿದ ವೆಸ್ಟ್ ಇಂಡೀಸ್ 137 ರನ್ ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಟೀಂ ಇಂಡಿಯಾ 119 ರನ್ ಗಳ ಅಂತರ ಗೆಲುವು ಸಾಧಿಸಿದೆ. ಅಲ್ಲದೇ ಕೆರಿಬಿಯನ್ ನಾಡಲ್ಲಿ ಇದೇ ಮೊದಲ ಬಾರಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಕ್ಲೀನ್ ಕ್ವೀಪ್ ಮಾಡಿದೆ.