ಪ್ಲೇ ಆಫ್ಗೆ ಹೋಗಲು ಪೈಪೋಟಿ ಹೆಚ್ಚುತ್ತಿರುವುದರಿಂದ ಒತ್ತಡದಲ್ಲಿರುವ ಆರ್ಸಿಬಿ ಇಂದು ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಮಂಗಳವಾರ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಮುಂಬೈ ತಂಡಗಳು ಅಂಕಪಟ್ಟಿಯಲ್ಲಿ ಟಾಪ್ 4ಕ್ಕೇ ಏರಲು ಹೋರಾಡಲಿವೆ.ಈಗಾಗಲೇ ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ ಮುಂಬೈ ವಿರುದ್ಧ ಗೆದ್ದಿತ್ತು. ಅಂಕಪಟ್ಟಿಯಲ್ಲಿ ಆರ್ಸಿಬಿ 10 ಪಂದ್ಯಗಳಿಂದ 5ರಲ್ಲಿ ಗೆಲುವು 5ರಲ್ಲಿ ಸೋತು ಐದನೆ ಸ್ಥಾನದಲ್ಲಿದೆ.
ಮುಂಬೈ ತಂಡ ಕೂಡ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತು ಆರನೆ ಸ್ಥಾನದಲ್ಲಿದೆ. ಆರ್ಸಿಬಿ ತಂಡದ ನಾಯಕ ಫಾಪ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಹೊರತುಪಡಿಸಿ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತಾ ಪ್ರದರ್ಶನ ಬಂದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಈ ಮೂವರು ಬ್ಯಾಟರ್ಗಳನ್ನು ನೆಚ್ಚಿಕೊಂಡಿದೆ.
ಮಹಿಪಾಲ್ ಲೊಮ್ರೊರೊರ್ ಮೊನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 54 ರನ್ ಹೊಡೆದಿದ್ದು ಸಾಕಾಗಲಿಲ್ಲ. ಇದರ ಪರಿಣಾಮ ಆರ್ಸಿಬಿ 5ನೇ ಸೋಲು ಕಾಣಬೇಕಾಯಿತು. ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ 511 ರನ್ ಹೊಡೆಯುವ ಮೂಲಕ ಈ ಋತುವಿನಲ್ಲಿ 500 ರನ್ ಗಡಿ ದಾಟಿದ ಏಕೈಕ ಬ್ಯಾಟರ್ ಆಗಿದ್ದಾರೆ. ಇಂದು ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿದರೆ ಡುಪ್ಲೆಸಿಸ್ ರನ್ ಮಳೆ ಸುರಿಸಲಿದ್ದಾರೆ. ತಂಡವನ್ನು ಚಿಂತೆಗೀಡು ಮಾಡಿರುವುದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ವೈಫಲ್ಯ ಅನುಭವಿಸಿದ್ದಾರೆ. ಕೆಳ ಕ್ರಮಾಂಕದಲ್ಲೂ ಸೋಟಕ ಬ್ಯಾಟರ್ ಇಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಶ್ ಹೆಜ್ಲ್ವುಡ್ ಬಲ ಬಂದಿದ್ದು ಸಿರಾಜ್ಗೆ ಶಕ್ತಿ ತುಂಬಿದ್ದಾರೆ. ಸಿರಾಜ್ 10 ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ. ವಾಂಖೆಡೆಯಲ್ಲಿ ಹರಿಯಲಿದೆ ರನ್ ಹೊಳೆ ಮುಂಬೈ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದ್ದು ವಾಂಖೆಡೆ ಮೈದಾನದಲ್ಲಿ ರನ್ ಹೊಳೆ ಹರಿಯಲಿದೆ. ಟಿಮ್ ಡೇವಿಡ್, ಕ್ಯಾಮರೊನ್ ಗ್ರೀನ್, ಸೂರ್ಯ ಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಎಂತಹ ದೊಡ್ಡ ಮೊತ್ತವನ್ನು ಚೇಸ್ ಮಾಡುವ ತಾಕತ್ತು ಹೊಂದಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ತಂಡವನ್ನು ಚಿಂತೆಗೀಡು ಮಾಡಿದೆ. ಕಳೆದ 10 ಪಂದ್ಯಗಳಿಂದ ರೋಹಿತ್ 184 ರನ್ ಹೊಡೆದಿದ್ದಾರೆ. ಕೇವಲ 18.39 ಸರಾಸರಿ ಹೊಂದಿದ್ದಾರೆ. ಸತತ ಎರಡನೆ ಋತುವಿನಲ್ಲೂ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ಒಳ್ಳೆಯ ಆರಂಭ ನೀಡಬೇಕು. ಒಳ್ಳೆಯ ಆರಂಭವನ್ನು ನೀಡಿದ್ದಾರೆ. ಆದರೆ ಸ್ಥಿರ ಪ್ರದರ್ಶನ ಕಾಪಾಡುವಲ್ಲಿ ವಿಫಲರಾಗಿದ್ದಾರೆ.
ರೋಹಿತ್ ಶರ್ಮಾ ಅವರನ್ನು ಮೂರನೆ ಕ್ರಮಾಂಕದಲ್ಲಿ ಆಡಿಸಿ ಒತ್ತಡ ಕಡಿಮೆ ಮಾಡಿತು. ಚೆನ್ನೈ ವಿರುದ್ಧ ಮೂರನೆ ಕ್ರಮಾಂಕದಲ್ಲಿ ಇಳಿದು ಡಕೌಟ್ ಆದರು. ಇದರೊಂದಿಗೆ ನಾಲ್ಕನೆ ಬಾರಿಗೆ ಒಂದಂಕಿ ರನ್ ಹೊಡೆದರು. ಮುಂಬೈ ತಂಡಕ್ಕೆ ಡೆತ್ ಬೌಲಿಂಗ್ ದೊಡ್ಡ ಚಿಂತೆಗೀಡು ಮಾಡಿದೆ. ಕಳೆದ ನಾಲ್ಕು ಪಂದ್ಯಗಳಿಂದ ಮುಂಬೈ ಬೌಲರ್ಗಳು 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ ಎರಡು ವಾಂಖೆಡೆ ಮೈದಾನದಲ್ಲಿ ಅನ್ನೊದೇ ಗಮನಾರ್ಹ ಅಂಶವಾಗಿದೆ.