ADVERTISEMENT
Sunday, August 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ

Shwetha by Shwetha
August 30, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ ಬಾರಿ ರಾಜೀನಾಮೆ ನೀಡಿರುವುದು ಭಾರೀ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಈಗ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಪಕ್ಷದ ನಾಯಕರಿಗೆ ದೊಡ್ಡ ಮುಜುಗರ ತಂದಿಟ್ಟಿದೆ.

ತನಿಖೆ ನಡೆಯುತ್ತಿರುವಾಗಲೇ ಸಂಪುಟಕ್ಕೆ ತಗೊಂಡಿದ್ದು ತಪ್ಪು

Related posts

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

August 30, 2026
ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

August 30, 2026

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ ಅವರು ಸರ್ಕಾರದ ನಿರ್ಧಾರವನ್ನು ಬಹಿರಂಗವಾಗಿಯೇ ಟೀಕಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ 185 ಕೋಟಿ ರೂ. ಹಗರಣದ ಕೇಸ್ ಇನ್ನೂ ಜೀವಂತವಾಗಿರುವಾಗಲೇ ನಾಗೇಂದ್ರ ಅವರನ್ನು ಮತ್ತೆ ಕ್ಯಾಬಿನೇಟ್ ಗೆ ಸೇರಿಸಿಕೊಳ್ಳಬಾರದಿತ್ತು. ಯಾವ ಹಗರಣದ ತನಿಖೆ ನಡೆಯುತ್ತಿದೆಯೋ, ಅದೇ ಕಾರಣಕ್ಕೆ ಅವರು ಹಿಂದೆ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಅದೇ ಪ್ರಕರಣದ ಆಧಾರದ ಮೇಲೆ ರಾಜೀನಾಮೆ ನೀಡುವಂತಾಗಿದೆ. ಅಂದು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು ಎಂದು ರಾಜಣ್ಣ ನೇರವಾಗಿಯೇ ಹೇಳಿದ್ದಾರೆ.

ನಾಗೇಂದ್ರರನ್ನು ಬಲಿಪಶು ಮಾಡಲಾಗಿದೆ

ನಾಗೇಂದ್ರ ಅವರ ಬಗ್ಗೆ ಕರುಣೆ ವ್ಯಕ್ತಪಡಿಸಿದ ರಾಜಣ್ಣ, ಅವರನ್ನು ವ್ಯವಸ್ಥಿತವಾಗಿ ಬಲಿಪಶು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ನಾಗೇಂದ್ರ ಕಂಡರೆ ನನಗೆ ಮರುಕವಾಗುತ್ತದೆ. ಅವರನ್ನು ಈಗಾಗಲೇ ಎರಡು ಬಾರಿ ಬಲಿಪಶು ಮಾಡಿದಂತಾಗಿದೆ. ಮೊದಲ ಬಾರಿಯ ರಾಜೀನಾಮೆ ಹಿರಿಯರ ನಿರ್ಧಾರವಾಗಿತ್ತು, ಆದರೆ ಈ ಬಾರಿ ಅವರನ್ನು ಅನವಶ್ಯಕವಾಗಿ ಇಂತಹ ಪರಿಸ್ಥಿತಿಗೆ ದೂಡಲಾಗಿದೆ. ನಾಗೇಂದ್ರ ಇನ್ನೂ ಯುವ ನಾಯಕ, ಇಂತಹ ಬೆಳವಣಿಗೆಗಳಿಂದ ಅವರಿಗೆ ರಾಜಕೀಯದ ಮೇಲೆಯೇ ಜಿಗುಪ್ಸೆ ಬರುತ್ತದೆ. ಈ ಪ್ರಕ್ರಿಯೆ ಸರಿಯಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ

ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ ರಾಜಣ್ಣ, ನಾವು 50 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಹೋರಾಟ ಮಾಡಿಕೊಂಡು ಬಂದವರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಡಿಲಿಮಿಟೇಶನ್ ಆದ ನಂತರ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ನಾನು ಈಗಲೂ ಕಾಂಗ್ರೆಸ್ ನಲ್ಲಿದ್ದೇನೆ, ಮುಂದೆಯೂ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದರು.

ದೇವೇಗೌಡರ ಭೇಟಿ ಕೇವಲ ಸೌಜನ್ಯ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ವಿಚಾರಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಅವರು ಮನವಿ ಮಾಡಿದರು. ಚೆನ್ನಮ್ಮನವರು ನಿಧನರಾದಾಗ ನಾನು ಹೊಳೆನರಸೀಪುರಕ್ಕೆ ಹೋಗಿದ್ದೆ. ಅವರು ವಿದೇಶದಿಂದ ಬಂದ ಮೇಲೆ ಸೌಜನ್ಯಕ್ಕಾಗಿ ಭೇಟಿ ಮಾಡಿದ್ದೇನೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಾಗೇಂದ್ರ ಅವರ ರಾಜೀನಾಮೆ ವಿಚಾರದಲ್ಲಿ ಸ್ವಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರಾಜಣ್ಣ ಅವರ ಈ ಶಾಕಿಂಗ್ ಹೇಳಿಕೆ ಸರ್ಕಾರದ ಮುಂದಿನ ನಡೆಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.

ShareTweetSendShare
Join us on:

Related Posts

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಾಲ್ಮೀಕಿ ನಿಗಮ ಹಗರಣ: ‘ಬಿ. ನಾಗೇಂದ್ರರನ್ನು ಬಿಜೆಪಿ ಷಡ್ಯಂತ್ರದಿಂದ ಗುರಿಯಾಗಿಸಿದೆ’ ಎಂದ BK ಹರಿಪ್ರಸಾದ್

by Shwetha
August 30, 2026
0

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ ಇದೀಗ ರಾಜ್ಯ...

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

ಟಾಟಾ ಸನ್ಸ್–SP ಗ್ರೂಪ್ ಉದ್ವಿಗ್ನತೆ ಅಂತಿಮ ಹಂತಕ್ಕೆ?; 18.4% ಪಾಲು ಮಾರಾಟಕ್ಕೆ ಮಾತುಕತೆ

by Shwetha
August 30, 2026
0

ಭಾರತೀಯ ಕಾರ್ಪೊರೇಟ್ ವಲಯದಲ್ಲಿ ದಶಕಗಳಿಂದ ಕುತೂಹಲ ಮೂಡಿಸಿರುವ ಟಾಟಾ ಸನ್ಸ್ ಮತ್ತು ಶಾಪೂರ್ಜಿ ಪಲ್ಲೊಂಜಿ (SP) ಗ್ರೂಪ್ ನಡುವಿನ ಸಂಬಂಧದ ಬಿಕ್ಕಟ್ಟು ಇದೀಗ ಮತ್ತೊಂದು ಪ್ರಮುಖ ಹಂತ...

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

ಮೋದಿ ಸರ್ಕಾರದ ಒತ್ತಡದಿಂದ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಪ್ರಕಟಣೆಗೆ ತಡೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದ ಕಾಂಗ್ರೆಸ್

by Shwetha
August 30, 2026
0

ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಪಯಣವನ್ನು ಅನಾವರಣಗೊಳಿಸುವ Belonging: A Journey of Love ಎಂಬ ಆತ್ಮಚರಿತ್ರೆ ಈಗ...

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

ಬ್ರಿಟಿಷರಿಗೇ ಹೆದರದ ನಮಗೆ ಈ ಬಿಜೆಪಿಗರು ಯಾವ ಪುಟ್ಗೋಸಿ? ಬಿಜೆಪಿ ಒಂದು ನಾಟಕ ಕಂಪನಿ, ಇವರ ಪಾದಯಾತ್ರೆ ಗಣಿ ಲೂಟಿಕೋರರ ಪಶ್ಚಾತ್ತಾಪ ಯಾತ್ರೆ: ಶಿವರಾಜ್ ತಂಗಡಗಿ ವ್ಯಂಗ್ಯ

by Shwetha
August 30, 2026
0

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಬೆನ್ನಿಗೆ ನಿಂತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ...

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಅಕ್ರಮದ ಆರೋಪ; ಪ್ರಿಯಾಂಕ್ ಖರ್ಗೆ ವಿರುದ್ಧ HDK ವಾಗ್ದಾಳಿ, ‘ನನ್ನ ಮುಂದೆ ಹಗುರವಾಗಿ ಮಾತನಾಡಬೇಡಿ’ ಎಚ್ಚರಿಕೆ

by Shwetha
August 30, 2026
0

ರಾಜ್ಯ ರಾಜಕಾರಣದಲ್ಲಿ KPSC ನೇಮಕಾತಿ ಅಕ್ರಮದ ಆರೋಪದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಕುಮಾರಸ್ವಾಮಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram