ರೀ ರಿಲೀಸ್ ಆಗಲಿವೆ ಸೂಪರ್ ಸ್ಟಾರ್ಸ್ ಗಳ ಸೂಪರ್ ಹಿಟ್ ಸಿನಿಮಾಗಳು
ಲಾಕ್ ಡೌನ್ ನಿಂದಾಗಿ ಸುಮಾರು 6-7 ತಿಂಗಳುಗಳಿಂದ ಬಂದ್ ಆಗಿದ್ದ ಥಿಯೇಟರ್ ಗಳು ಇದೀಗ ಮತ್ತೆ ಓಪನ್ ಆಗಿವೆ. ಹಲವಾರು ಸುರಕ್ಷತಾ ಕ್ರಮಗಳನ್ನ ತೆಗೆದುಕೊಂಡು ಸೂಕ್ತ ಕೊರೊನಾ ನಿಯಮಗಳ ಪಾಲನೆ ಮೂಲಕ ಥಿಯೇಟರ್ ಗಳಲ್ಲಿ ಸಿನಿಮಾ ವೀಕ್ಷಣೆಗೇನೋ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಹೊಸ ಸಿನಿಮಾಗಳು ಹಾಗೂ ಬಹುನಿರೀಕ್ಷತ ಸಿನಿಮಾಗಳನ್ನ ರಿಲೀಸ್ ಮಾಡಲು ಮೇಕರ್ಸ್ ಹಿಂದೇಟು ಹಾಕುತ್ತಿದ್ದಾರೆ. ಸಿನಿಮಾ ಬಿಡುಗಡೆ ಮಾಡಿದರೆ ಜನರು ಥಿಯೇಟರ್ ಗಳತ್ತ ಬರುತ್ತಾರೋ ಇಲ್ಲವೋ ಎಂಬ ಗೊಂದಲಗಳಿವೆ.
ಇದರ ನಡುವೆ ಈಗಾಗಲೇ ರಿಲೀಸ್ ಆಗಿ ಸಕ್ಸಸ್ ಕಂಡಿರುವ ಸಿನಿಮಾಗಳನ್ನ ರೀ ರಿಲೀಸ್ ಮಾಡುವ ಪರ್ವ ಚಂದನವನದಲ್ಲಿ ಆರಂಭವಾಗಿದೆ. ಅದರಂತೆ ಈಗ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ಸ್ ಗಳ ಸೂಪರ್ ಹಿಟ್ ಸಿನಿಮಾಗಳನ್ನ ಮರುಬಿಡುಗಡೆ ಮಾಡಲಾಗುತ್ತಿದೆ.
ಪ್ರೇಮ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಪ್ರೈಸ್ : “ಐ ಆಮ್ ಕಲ್ಕಿ” ಗೆ ನಾಯಕ ಪ್ರೇಮ್..!
ಹೌದು.. ಈ ವಾರದಿಂದ ಸಿನಿಮಾ ಮಂದಿರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಅಬ್ಬರ ಶುರುವಾಗಲಿದೆ. ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ಚಿತ್ರಗಳ ಮರು ಬಿಡುಗಡೆಯಾಗುತ್ತಿವೆ.
ಮತ್ತೆ ತೆರೆಮೇಲೆ ಬರುತ್ತಿದ್ದಾನೆ “ರಾಕಿ ಭಾಯ್ “
ಪ್ರಮುಖವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಬ್ಲಾಕ್ ಬಾಸ್ಟರ್ ಸಿನಿಮಾವಾದ ಕೆಜಿಎಫ್ ರಿ ರೀಲೀಸ್ ಆಗ್ತಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ದೇಶಾದ್ಯಂತ ಸದ್ದು ಮಾಡಿ ಪರಭಾಷೆಗಳಲ್ಲೂ ಅಬ್ಬರಿಸಿದ ರಾಕಿ ಭಾಯ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಬರುತ್ತಿದ್ದಾರೆ. ಇನ್ನೂ ಈ ಚಿತ್ರದ ಸೀಕ್ವೆನ್ಸ್ ಕೆ ಜಿ ಎಫ್ ಚಾಪ್ಟರ್ 2 ಶೂಟಿಂಗ್ ನಡಿಯುತ್ತಿದ್ದು, ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಹುತೇಕ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಹಲಸೂರ್‍ನ ಐನಾಕ್ಸ್, ಸಿಗ್ಮಾ ಮಾಲ್‍ನ ಫನ್ ಸಿನಿಮಾ, ಮಾಗಡಿ ರಸ್ತೆಯ ಜಿಟಿ ಮಾಲ್, ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ, ಡಾ ರಾಜ್ ಕುಮಾರ್ ರಸ್ತೆಯ ಒರೆಯಾನ್ ಮಾಲ್, ಮೀನಾಕ್ಷಿ ಮಾಲ್, ಬೆಳ್ಳಂಡೂರಿನ ಸೆಂಟ್ರಲ್ ಮಾಲ್ ಸೇರಿದಂತೆ ಹಲವು ಸ್ಕ್ರೀನ್‍ಗಳಲ್ಲಿ ಕೆಜಿಎಫ್ ಮತ್ತೆ ಪ್ರದರ್ಶನ ಕಾಣುತ್ತಿದೆ.
‘ಸುದೀಪ’ನ ಕೋಟಿಗೊಬ್ಬ 2
ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 2 ಸಹ ಸೂಪರ್ ಹಿಟ್ ಆಗಿ ಹೊರಹೊಮ್ಮಿದ್ದ ಸಿನಿಮಾ. ಈ ಸಿನಿಮಾದಲ್ಲಿ ಸುದೀಪ್ ಅವರ ಮಾಸ್ ಗೆಟಪ್ ಅಭಿಮಾನಿಗಳ ಮನಗೆದ್ದಿತ್ತು. ಕಿಚ್ಚನ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರವೂ ಸಹ ಇದೀಗ ಮರುಬಿಡುಗಡೆಯಾಗುತ್ತಿದೆ. ಸಿರ್ಸಿ ಸರ್ಕಲ್‍ನ ಗೋಪಾಲನ್ ಮಾಲ್, ಮಾಗಡಿ ರಸ್ತೆಯ ಜಿಟಿ ಮಾಲ್, ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ, ರಾಜ್ ಕುಮಾರ್ ರಸ್ತೆಯ ಒರೆಯಾನ್ ಮಾಲ್‍ನಲ್ಲಿ ಕೋಟಿಗೊಬ್ಬ 2 ಪ್ರದರ್ಶನ ಇದೆ. ಇನ್ನೂ ಕೋಟಿಗೊಬ್ಬ 3 ಸಹ ಶೂಟಿಂಗ್ ಕಂಪ್ಲೀಟ್ ಆಗಿ ರಿಲೀಸ್ ಗೆ ರೆಡಿಯಾಗಿದೆ. ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿರುವ ಬೆನ್ನಲ್ಲೇ ಮತ್ತೆ ಕೋಟಿಗೊಬ್ಬ 2 ರೀ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಮತ್ತೊಮ್ಮೆ ‘ಕುರುಕ್ಷೇತ್ರದ’ ದರ್ಶನ
ಹೈಬಜೆಟ್ ಸಿನಿಮಾವಾಗಿದ್ದ ಕುರುಕ್ಷೇತ್ರವೂ ಸಹ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುದೊಡ್ಡ ತಾರಬಳಗ ನಟಿಸಿರುವ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಇಂದಿನಿಂದ ಮತ್ತೆ ಪ್ರದರ್ಶನ ಆರಂಭಿಸಿದೆ. ಸಿರ್ಸಿ ಸರ್ಕಲ್‍ನ ಗೋಪಾಲನ್ ಮಾಲ್, ಮೈಸೂರು ರ ಗೋಪಾಲಸ್ತೆಯನ್ ಮಾಲ್, ಬಿನ್ನಿಪೇಟೆಯ ಮಾಲ್‍ಗಳಲ್ಲಿ ಕುರುಕ್ಷೇತ್ರ ಶೋ ಇದೆ.
ಮತ್ತೊಮ್ಮೆ “ಟಗರು” ಅಬ್ಬರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಟಗರು ಸಹ ಮತ್ತೆ ರೀ ರಿಲೀಸ್ ಆಗ್ತಾಯಿದೆ. ಈ ಚಿತ್ರದಲ್ಲಿನ ಶಿವರಾಜ್ ಕುಮಾರ್ ಅವರ ಲುಕ್ ಅಭಿಮನಾನಿಗಳ ಗಮನಸೆಳೆದಿತ್ತು. ಮಾನ್ವಿತಾ ಹಾಗೂ ಭಾವನಾ ಶಿವರಾಜ್ ಕುಮಾರ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು.
“ನಾಗರಹಾವು”
ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ.
ಮತ್ತೆ ಬರುತ್ತಿದ್ದಾನೆ “ಜೆಂಟಲ್ ಮೆನ್”
ಇನ್ನೂ ಪ್ರಜ್ವಲ್ ದೇವರಾಜ್ ನಟನೆಯ ಜೆಂಟಲ್ ಮೆನ್ ಸಹ ಮತ್ತೊಮ್ಮೆ ಬಿಡುಗಡೆಯಾಗಲಿದೆ.
ಒಟ್ಟಾರೆ ಬಿಗ್ ಸ್ಟಾರ್ ಗಳ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗುತ್ತಿರುವುದಕ್ಕೆ ಸಿನಿಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಸ್ಟಾರ್ ಸಿನಿಮಾಗಳ ರಿಲೀಸ್ ಮಾಡಿ ಪ್ರೇಕ್ಷಕರನ್ನ ಥಿಯೇಟರ್ ಗಳತ್ತ ಸೆಳೆಯುವ ತಂತ್ರ ಸಿನಿಮೇಕರ್ಸ್ ದು ಚಿತ್ರಮಂದಿರಗಳ ಮಾಲೀಕರದ್ದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel