ಓದಿ ದಿನದ ಟಾಪ್ 5 ಸುದ್ದಿಗಳು..!
ಭಾರತದಲ್ಲಿ ಕಳೆದ 24 ಗಂಟಗಳಲ್ಲಿ 2,71,202 ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 314 ಮಂದಿ ಹೆಮ್ಮಾರಿ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. 1,38,331 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 15,50,377 ಸಕ್ರಿಯ ಪ್ರಕರಣಗಳು ಇವೆ.
ದೇಶದಲ್ಲಿ ಕೊರೊನಾವನ್ನು ನಿಯಂತ್ರಿಸಲು, ಕೊರೊನಾ ಲಸಿಕೆ ಪ್ರಾರಂಭಿಸಲಾಗಿತ್ತು. ಕೊರೊನಾ ಲಸಿಕೆ ಪ್ರಾರಂಭಿಸಿ ಒಂದು ವರ್ಷ ಪೂರೈಸಿದೆ. ಹೀಗಾಗಿ #1YearOfVaccineDrive ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವಿಟ್ವ್ ಮಾಡಿದ್ದಾರೆ. ಕೇಂದ್ರ ಸರಕಾರ 2021 ಜನವರಿ 2 ರಂದು ಲಸಿಕೆಯನ್ನು ತುರ್ತಾಗಿ ಉಪಯೋಗಿಸಲು ಅನುಮತಿ ನೀಡಿತ್ತು. ನಂತರ ಜನವರಿ 16 ರಂದು ದೇಶಾದ್ಯಂತ ಲಸಿಕೆ ನೀಡಲು ಪ್ರಾರಂಭ ಮಾಡಲಾಗಿತ್ತು.
ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂಗೆ ರಾಜ್ಯದ ಹಲವೆಡೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜನರು ಬೇಕಾಬಿಟ್ಟಿ ಓಡಾಡಿದ್ರೆ, ಕೆಲವು ಜಿಲ್ಲೆಗಳಲ್ಲಿ ಕರ್ಪ್ಯೂ ನಿಯಮ ಪಾಲಿಸುತ್ತಿದ್ದಾರೆ. ಹುಬ್ಬಳ್ಳಿಯ ಪ್ರಸಿದ್ಧ ಮೀನು ಮಾರುಕಟ್ಟೆ ಜನರಿಲ್ಲದೆ ಗೊಣಗೂಡುತ್ತಿದೆ. ವಿಜಯಪುರದಲ್ಲಿ ಮಾಸ್ಕ್ ಇಲ್ಲದೇ ಜನರು ಮಾರ್ಕೆಟ್ ಗೆ ಮುಗಿಬಿದ್ದಿದ್ದರು.
ಬಾಲಿವುಡ್ ನಿಂದ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಗೆ ಬಂಫರ್ ಆಫರ್ ಸಿಕ್ಕಿದೆಯಂತೆ.. ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಗೆ ಸುಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗ್ತಿದೆ. ಪುಷ್ಪ ಸಿನಿಮಾ ನೋಡಿರುವ ಅಕ್ಷಯ್ ಕುಮಾರ್ ಸುಕುಮಾರ್ ಅವರಿಗೆ ಕರೆ ಮಾಡಿ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.. ಅಷ್ಟೇ ಅಲ್ಲದೇ ಇದೇ ಸಮಯದಲ್ಲಿ ಇಬ್ಬರು ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಭಾರತ ತಂಡವನ್ನು ಎಲ್ಲಾ ಫಾರ್ಮೆಟ್ಗಳಲ್ಲಿ ಮುಂಚೂಣಿಯಲ್ಲಿರಿಸುವಲ್ಲಿ ವಿರಾಟ್ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯಕತ್ವದಿಂದ ಕೆಳಗಿಳಿಯುವುದು ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಬಿಸಿಸಿಐ ಅದನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ.