ಇಂದಿನಿಂದ Realme C30 ಮೊಬೈಲ್ ಮಾರಾಟ – ಆರಂಭಿಕ ಬೆಲೆ 7,499 ರೂ
ರಿಯಲ್ ಮಿ ಕಂಪನಿ ಬಿಡುಗಡೆಗೊಳಿಸುತ್ತಿರುವ ಕಡಿಮೆ ಬೆಲೆಯ ಹೊಸ ಮೊಬೈಲ್ Realme C30 ಜುಲೈ 27 ರಿಂದ ಅಂದರೆ ಇಂದಿನಿಂದ ಭಾರತದಲ್ಲಿ ಮಾರಾಟವಾಗಲಿದೆ. ಫ್ಲಿಪ್ ಕಾರ್ಟ್, ರಿಯಲ್ ಮಿ ಅಧಿಕೃತ ವೆಬ್ ಸೈಟ್ ಮತ್ತು ಎಲ್ಲಾ ಲೋಕಲ್ ಸ್ಟೋರ್ ಗಳಲ್ಲಿ ಮೊಬೈಲ್ ಗಳನ್ನ ಕೊಂಡುಕೊಳ್ಳಬಹುದು.
Realme C30 ಮೊಬೈಲ್ ಎರಡು ಬಣ್ಣಗಳಲ್ಲಿ ಮತ್ತು ಎರಡು ವಿಭಿನ್ನ ಮೆಮೊರಿ ಸ್ಟೋರೇಜ್ ಸೈಜ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಕಡಿಮೆ ಬೆಲೆಯ ಪ್ರಾಥಮಿಕ ಮಟ್ಟದ ಸ್ಮಾರ್ಟಪೋನ್ ಆಗಿದ್ದು, 5000mAh ಬ್ಯಾಟರಿ ಹೊಂದಿದೆ ಮತ್ತು ಮೊಬೈಲ್ ನ ಹಿಂಬದಿ 8 ಮೆಗಾಫಿಕ್ಸೆಲ್ ಗಳ ಕ್ಯಾಮೆರಾ ಒಳಗೊಂಡಿದೆ. ಕ್ಸಿಯೋಮಿ, ಮೋಟೋರೋಲ ದಂಥಹ ಕಡಿಮೆ ಬಡ್ಜೆಟ್ ಪೋನ್ಗಳಿಗೆ ಪ್ರತಿಸ್ಪರ್ಧಿಯಾಗಿ ಈ ಮೊಬೈಲ್ ಬಿಡುಗಡೆ ಮಾಡಲಾಗುತ್ತಿದೆ.

ಗ್ರಾಹಕರು 2GB RAM ಮತ್ತು 32GB ಸ್ಟೋರೇಜ್ ಅಥವಾ 3GB RAM ಮತ್ತು 32GB ಸ್ಟೋರೇಜ್ ಹೊಂದಿರುವ ಎರಡು ಮಾದರಿಗಳಲ್ಲಿ ಮೊಬೈಲ್ ಆಯ್ಕೆ ಮಾಡಿಕೊಳ್ಳಬಹುದು. ಕ್ರಮವಾಗಿ Rs 7,499 ಮತ್ತು Rs 8,299, ಬೆಲೆಯನ್ನ ನಿಗದಿಪಡಿಸಲಾಗಿದೆ. Realme C30 ಲೇಕ್ ಬ್ಲೂ ಮತ್ತು ಬ್ಯಾಂಬೂ ಗ್ರೀನ್ ಕಲರ್ ಕಾಂಬಿನೇಷನ್ ನಲ್ಲಿ ಲಭ್ಯವಿದೆ.
Realme C30 ಫೀಚರ್ ಗಳು
ಇನ್ನು ಈ ಮೊಬೈಲ್ ನ ಫೀಚರ್ ಗಳ ಬಗ್ಗೆ ಮಾತನಾಡುವುದಾದರೆ. Realme C30 6.5-ಇಂಚಿನ ಪೂರ್ಣ-ಸ್ಕ್ರೀನ್ ಡಿಸ್ಪ್ಲೇ ಒಳಗೊಂಡಿದೆ. ಯುನಿಸೊಕ್ (T612) ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಬಜೆಟ್ ಸ್ಮಾರ್ಟ್ಫೋನ್ಗಳಲ್ಲಿ ಸಾಮಾನ್ಯವಾಗಿದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಮೆಮೋರಿ ಕಾರ್ಡ್ ಬೆಂಬಲವನ್ನ ಪಡೆಯಬಹುದು.








