Realme India ದಿಂದ ನಾಳೆ ಬಿಡುಗಡೆಯಾಗುತ್ತಿದೆ Realme GT Neo 3T
Realme ಭಾರತದಲ್ಲಿ ತನ್ನ ಹೊಸ ಮಾಡೆಲ್ ಸ್ಮಾರ್ಟ್ ಪೋನ್ GT Neo 3T ನ್ನ ಭಾರತದಲ್ಲಿ ಬಿಡುಗೆಡ ಮಾಡಲು ಸಿದ್ದತೆ ನಡೆಸುತ್ತಿದೆ. ಚೀನಾದ ಸ್ಮಾರ್ಟ್ಪೋನ್ ಕಂಪನಿ ಬಿಡುಗಡೆಗೆ ಮುಂಚಿತವಾಗಿ 7000 ರುಪಾಯಿ ರಿಯಾಯಿತಿ ನೀಡಲು ಮುಂದೆ ಬಂದಿದೆ.
80W ಚಾರ್ಜಿಂಗ್ ಸಪೋರ್ಟಿಂಗ್ ನೊಂದಿಗೆ ಸ್ಯಾಪ್ ಡ್ರಾಗನ್ 870 SOC ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಈ ಸ್ಮಾರ್ಟ್ ಪೋನ್ ಅನ್ನ ಜೂನ್ ನಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ.
ಭಾರತದಲ್ಲಿ Realme GT Neo 3T ಬೆಲೆ ಇನ್ನೂ ಬಿಡುಗಡೆಯಾಗಿಲ್ಲ. Realme ಜಾಗತಿಕ ಮಾರುಕಟ್ಟೆಯಲ್ಲಿ $469.99 (Rs 37,500) ಕಾಸ್ಟ್ ನಲ್ಲಿ ಸ್ಮಾರ್ಟ್ಫೋನ್ ನ್ನ ಬಿಡುಗಡೆ ಮಾಡಿದೆ.
Realme GT Neo 3T ಸ್ಮಾರ್ಟ್ಪೋನ್ 5G ಸಂಪರ್ಕವನ್ನ ಹೊಂದಿರುವ ಮೊಬೈಲ್ ಆಗಿದ್ದು, ಸ್ನಾಪ್ಡ್ರಾಗನ್ 870 SoC ನಿಂದ ಚಾಲಿತವಾಗುತ್ತದೆ . ಮೊಬೈಲ್ ನ ಹಿಂದಿನ ಪ್ಯಾನೆಲ್ ನಲ್ಲಿ ರೇಸಿಂಗ್ ಫ್ಲ್ಯಾಗ್ ಡಿಸೈನ್ ನೀಡಲಾಗಿದೆ.
ವಿದೇಶದಲ್ಲಿ ಬಿಡುಗಡೆಯಾಗಿರುವ Realme GT Neo 3T ಮೊಬೈಲ್ ನಲ್ಲಿ 120Hz ರಿಫ್ರೆಶ್ ರೇಟ್ ನೊಂದಿಗೆ 6.62-ಇಂಚಿನ E4 AMOLED ಡಿಸ್ಪ್ಲೇಯನ್ನ ಹೊಂದಿದೆ. ಈ ಡಿಸ್ಪ್ಲೇ 1300 nits ವರೆಗೆ ಗರಿಷ್ಠ ಹೊಳಪನ್ನು ನೀಡುತ್ತದೆ ಎಂದು Realme ಹೇಳಿದೆ. ಜೊತೆಗೆ Adreno 650 ಗ್ರಾಫಿಕ್ ಪ್ರೊಸೆಸರ್ ಯುನಿಟ್ ಮತ್ತು 8GB RAM ನ್ನು ಹೊಂದಿದೆ.