Realme Techlife Watch R100 ಮುಂದಿನ ವಾರ ಭಾರತದಲ್ಲಿ ಬಿಡುಗಡೆ…
Realme Techlife ನ ಹೊಸ ಸ್ಮಾರ್ಟ್ ವಾಚ್ Realme Techlife Watch R100 ಮುಂದಿನ ವಾರ ಜೂನ್ 23 ರಂದು ಮಧ್ಯಾಹ್ನ 12.30 ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದೆ. Realme Techlife ವಾಚ್ R100 ನ ಫೀಚರ್ಸ್ ಗಳನ್ನ ತಿಳಿಯಲು ಈ ಸ್ಟೋರಿ ಓದಿ..
Realme Techlife Watch R100 1.32 ಇಂಚಿನಷ್ಟು ಡಿಸ್ಪ್ಲೆ ಹೊಂದಿದ್ದು, ಜೊತೆಗೆ ಬ್ಲೂಟೂತ್ ಕರೆ ಮಾಡುವ ಫೀಚರ್ಸ್ ಒಳಗೊಂಡಿದೆ. ಈ ಹಿಂದೆ ಕಂಪನಿಯು Realme TechLife Watch S100 ಮತ್ತು Realme TechLife Watch SZ100 ನಂತಹ ಸ್ಮಾರ್ಟ್ ವಾಚ್ಗಳನ್ನು ಬಿಡುಗಡೆ ಮಾಡಿತ್ತು ಎಂಬುದು ಗಮನದಲ್ಲಿಡಿ.

Realme Techlife Watch R100 ವಾಚ್ 1.32 ಇಂಚುಗಳಷ್ಟು ಕಲರ್ ಡಿಸ್ಪ್ಲೆ ಒಳಗೊಂಡಿದೆ. ಗಡಿಯಾರ ಬ್ಲಾಕ್ ಮತ್ತು ಕ್ರೀಮ್ ಎರಡು ಕಲರ್ ಗಳಲ್ಲಿ ಹೊರಬರಲಿದೆ. ಈ ವಾಚ್ ಅನ್ನು ಫ್ಲಿಪ್ಕಾರ್ಟ್ ಮೂಲಕ ಕಂಡುಕೊಳ್ಳಬಹುದು. Realme TechLife Watch SZ100 ಬೆಲೆ ರೂ 2,499 ಎಂದು ನಿಗದಿಪಡಿಸಲಾಗಿದೆ.
Realme TechLife S100 ವಾಚ್ ರಕ್ತದ ಆಮ್ಲಜನಕದ ಮಟ್ಟವನ್ನ ತಿಳಿಸುವ ಸೆನ್ಸಾರ್ ನ್ನ ಹೊಂದಿದೆ. ಇನ್ನೂ ಹವಾಮಾನ ಅಪ್ಡೇಟ್, ಫ್ಲ್ಯಾಷ್ಲೈಟ್, ಸ್ಟಾಪ್ವಾಚ್, ಅಲಾರ್ಮ್, ವಾಕಿಂಗ್, ರನ್ನಿಂಗ್ನಂತಹ ಎಲ್ಲಾ ಫೀಚರ್ಸ್ ಗಳನ್ನ ಒಳಗೊಂಡಿದೆ.








