Vijay Devarakonda : ವಿಜಯ್ ನಗ್ನವಾಗಿ ಕಾಣಿಸಿಕೊಳ್ಳಲು ಇದೇ ಕಾರಣ
ರೌಡಿ ಹೀರೋ ವಿಜಯ್ ದೇವರಕೊಂಡ ತಾಜಾ ಸಿನಿಮಾ ಲೈಗರ್.
ಪಾನ್ ಇಂಡಿಯಾ ಸಿನಿಮಾವಾಗಿ ಸಿದ್ಧವಾಗುತ್ತಿರುವ ಈ ಸಿನಿಮಾ ಆಗಸ್ಟ್ 25 ರಂದು ಪ್ರೇಕ್ಷಕರ ಮುಂದೆ ಬರಲಿದೆ.
ಈ ಹಿನ್ನೆಲೆಯಲ್ಲಿ ಪ್ರಮೋಷನ್ ಕಾರ್ಯಕ್ರಮಗಳನ್ನು ಚಿತ್ರತಂಡ ಶುರು ಮಾಡಿದೆ.
ಅದರ ಭಾಗವಾಗಿಯೇ ಶನಿವಾರ ಹೀರೋ ವಿಜಯ್ ದೇವರಕೊಂಡ ಪೋಸ್ಟರ್ ರಿಲೀಸ್ ಮಾಡಿದೆ.
ಇದರಲ್ಲಿ ವಿಜಯ್ ನಗ್ನವಾಗಿ ಕಾಣಿಸಿಕೊಂಡಿದ್ದು, ಸೋಶೀಯಲ್ ಮಿಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದು ಗೊತ್ತಿರುವ ವಿಚಾರವೇ.

ಆದ್ರೆ ಅಂತರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್, ಅಲ್ಟಿಮೆಟ್ ಫೈಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಫೈಟರ್ ಗಳು ತೂಕ ಕಡಿಮೆ ಮಾಡಿಕೊಳ್ಳಲು ನ್ಯೂಡ್ ಆಗಿ ಇರುತ್ತಾರಂತೆ.
ಅವರ ತೂಕ ಗ್ರಾಮ್ ಗಳಲ್ಲಿ ಕಡಿಮೆ ಮಾಡಿಕೊಳ್ಳಲು ದೇಹದ ಮೇಲೆ ಒಂದೇ ಒಂದು ನೂಲು ಇಲ್ಲದಂತೆ ಇರುತ್ತಾರೆ.
ಈ ಲೀಗ್ ಗಳನ್ನು ಫಾಲೋ ಮಾಡುವವರಿಗೆ ಈ ವಿಷಯ ಚೆನ್ನಾಗಿ ಗೊತ್ತಿರುತ್ತದೆ.
ಆ ನೇಪಥ್ಯದಲ್ಲಿಯೇ ಸಿನಿಮಾ ಬರುತ್ತಿರುವುದರಿಂದ ಸಿಂಬಾಲಿಕ್ ಆಗಿ ಈ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಇನ್ನು ಈ ಪೋಸ್ಟರ್ ಗೆ ಟ್ರೋಲಿಂಗ್ ಜೊತೆ ಜೊತೆಗೆ ಪ್ರಸಂಶೆಗಳು ಕೂಡ ಬರುತ್ತಿವೆ.
ಇನ್ ಸ್ಟಾ ಗ್ರಾಂದಲ್ಲಿ ಈ ಪೋಸ್ಟರ್ ಗೆ 1.3 ಮಿಲಿಯನ್ ಲೈಕ್ಸ್ ಬಂದಿವೆ.