ನಟ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ (UI) ಚಿತ್ರ ಬಿಡುಗಡೆಗೆ ಕೌಂಟ್ ಡೌನ್ ಆಗಿದೆ.
ಚಿತ್ರದ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 24 ಸಾವಿರ ಟಿಕೆಟ್ ಸೋಲ್ಡ್ ಆಗಿವೆ. ಇದನ್ನು ಗಮನಿಸಿದರೆ, ಬಿಡುಗಡೆಗೂ ಮುನ್ನವೇ ಅಭಿಮಾನಿಗಳು ಚಿತ್ರದ ಕುರಿತು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಿ.20ರಂದು ಬಿಡುಗಡೆ ಆಗುತ್ತಿರುವ ‘ಯುಐ’ ಚಿತ್ರ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ. ಸೋಮವಾರದಿಂದ ಕರ್ನಾಟಕದಲ್ಲಿ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಓಪನ್ ಆಗಿದ್ದು, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 24 ಸಾವಿರ ಟಿಕೆಟ್ ಸೋಲ್ಡ್ ಆಗಿವೆ. ಅಂದರೆ, ಇಲ್ಲಿಯವರೆಗೆ 50 ಲಕ್ಷ ರೂ. ಮೌಲ್ಯದ ಟಿಕೆಟ್ ಮಾರಾಟವಾಗಗಿವೆ.
ಕೆಜಿಎಫ್’ ಸಿನಿಮಾ ನಂತರ ಈ ಪ್ರಮಾಣದಲ್ಲಿ ಟಿಕೆಟ್ ಮಾರಾಟವಾಗಿದ್ದು ‘ಯುಐ’ ಚಿತ್ರ ಎಂಬ ದಾಖಲೆಯನ್ನು ಈಗ ಈ ಚಿತ್ರ ಮಾಡಿದೆ. UI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್ ಭರ್ಜರಿಯಾಗಿ ಮೂಡಿ ಬಂದಿದೆ.
ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.








