ಐಪಿಎಲ್ ಟೂರ್ನಿ 17ನೇ ಆವೃತ್ತಿಗೆ ಬಂದು ನಿಂತಿದೆ. ಈ ಮಧ್ಯೆ 16ರ ಆವೃತ್ತಿಯವರೆಗೂ ಇದ್ದ ದಾಖಲೆಗಳನ್ನು ಒಂದೇ ಸೀಸನ್ ನಲ್ಲಿ ಬ್ಯಾಕ್ ಟು ಬ್ಯಾಕ್ ಎಂಬಂತೆ ಹೈದರಾಬಾದ್ ತಂಡ ಮುರಿದು ಸಾಧನೆ ಮೆರೆದಿದೆ.
2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 263 ರನ್ ಗಳಿಸಿ ಐತಿಹಾಸಿಕ ಸರ್ವ ಶ್ರೇಷ್ಠ ದಾಖಲೆ ಮಾಡಿತ್ತು. ಒಂದು ತಂಡ ಇನ್ನಿಂಗ್ಸ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ದಾಖಲೆ ಮಾಡಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ (175) ರನ್ ಗಳಿಸಿದ್ದರು. ಕಳೆದ 10 ವರ್ಷಗಳಲ್ಲಿ ಈ ದಾಖಲೆಯ ಸಮೀಪಕ್ಕೆ ಯಾರೂ ಹೋಗಲು ಆಗಿರಲಿಲ್ಲ. ಆದರೆ, ಹೈದರಾಬಾದ್ ತಂಡ ಒಂದೇ ಸೀಸನ್ ನಲ್ಲಿ ಬರೋಬ್ಬರಿ ಮೂರು ಬಾರಿ ಈ ದಾಖಲೆ ಮುರಿದಿದೆ. ಅದಕ್ಕಿಂತಲೂ ವಿಶೇಷ ಅಂದರೆ, 10 ವರ್ಷಗಳಿಂದ ಇದ್ದ ದಾಖಲೆ ಈಗ 5ನೇ ಸ್ಥಾನಕ್ಕೆ ಕುಸಿದಿರುವುದು.
ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಗಳಿಸಿದ್ದ ಹೈದರಾಬಾದ್ ತಂಡ, ಆರ್ಸಿಬಿ ವಿರುದ್ಧ 287 ರನ್ ಸಿಡಿಸಿ ಹೊಸ ಇತಿಹಾಸವನ್ನು ನಿರ್ಮಿಸಿತು. ಈಗ ಡೆಲ್ಲಿ ವಿರುದ್ಧ 266 ರನ್ಗಳಿಸಿದೆ. ಈ ಮೂಲಕ ಮೂರು ಬಾರಿ 263+ ರನ್ ಗಳಿಸಿದೆ. ಐಪಿಎಲ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ತಂಡಗಳ ಪಟ್ಟಿಯಲ್ಲಿ ಹೈದರಾಬಾದ್ ತಂಡ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದೆ. ಮೂರನೇ ಸ್ಥಾನದಲ್ಲಿ ಕೆಕೆಆರ್ (272 ಸ್ಕೋರ್) ಇದ್ದರೆ, ಮತ್ತೆ ನಾಲ್ಕನೇ ಸ್ಥಾನ ಹೈದರಾಬಾದ್ ಪಾಲಾಗಿದೆ.