ಭಾರತದಲ್ಲಿ ಇಂದು 56,383 ಕೋವಿಡ್-19 ಪ್ರಕರಣಗಳ ಚೇತರಿಕೆ
ಹೊಸದಿಲ್ಲಿ, ಅಗಸ್ಟ್ 13: ಭಾರತದಲ್ಲಿ ಗುರುವಾರ ಒಂದೇ ದಿನದಲ್ಲಿ 56,383 ಪ್ರಕರಣಗಳು ಕೊರೋನಾ ಸೋಂಕಿನಿಂದ ಚೇತರಿಕೆ ಕಂಡಿದ್ದು, ಈ ಮೂಲಕ ದೇಶದಲ್ಲಿ ಕೋವಿಡ್-19 ನಿಂದ ಚೇತರಿಕೆ ಕಂಡವರ ಸಂಖ್ಯೆ 17 ಲಕ್ಷ ಸಮೀಪಿಸಿದೆ.
ಗುರುವಾರ ಒಂದೇ ದಿನದಲ್ಲಿ ಭಾರತವು 56,383 ಕೊರೋನವೈರಸ್ ರೋಗಿಗಳ ಅತಿ ಹೆಚ್ಚು ಚೇತರಿಕೆ ದಾಖಲಿಸಿದೆ. ಕೋವಿಡ್-19 ನಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 16,95,982 ಮುಟ್ಟಿದೆ.

ಆಗಸ್ಟ್ 13 ರ ಹೊತ್ತಿಗೆ, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,53,622 ಆಗಿದ್ದು, ಒಂದು ದಿನದ ಹೆಚ್ಚಳ 9,674 ಆಗಿದೆ. ಕೋವಿಡ್-19ನಿಂದ ಸಾವನ್ನಪ್ಪಿದವರ ಸಂಖ್ಯೆ 47,033 ಕ್ಕೆ ತಲುಪಿದ್ದು, ನಿನ್ನೆಯಿಂದ 942 ಸಾವುಗಳು ದಾಖಲಾಗಿವೆ.
ರಾಜ್ಯಗಳಲ್ಲಿ, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1.5 ಲಕ್ಷ (1,47,820) ದೊಂದಿಗೆ ಮಹಾರಾಷ್ಟ್ರವು ಪ್ರಥಮ ಸ್ಥಾನದಲ್ಲಿದೆ. ಒಂದು ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಏಕೈಕ ರಾಜ್ಯ ಅದಾಗಿದೆ. ಮಹಾರಾಷ್ಟ್ರದ ನಂತರ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶದಲ್ಲಿ 90,425 ಸಕ್ರಿಯ ಪ್ರಕರಣಗಳಿವೆ.








