ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(Bharat Electronics Limited) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಬರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ 232 ಪ್ರೊಬೇಶನರಿ ಇಂಜಿನಿಯರ್, ಪ್ರೊಬೇಶನರಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 28, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ರಾಜ್ಯದಲ್ಲಿಯೇ ಪೋಸ್ಟಿಂಗ್ ಇರುತ್ತದೆ.
ಪ್ರೊಬೇಶನರಿ ಎಂಜಿನಿಯರ್- 205
ಪ್ರೊಬೇಶನರಿ ಆಫೀಸರ್- 12
ಪ್ರೊಬೇಶನರಿ ಅಕೌಂಟ್ಸ್ ಆಫೀಸರ್- 15 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರೊಬೇಶನರಿ ಎಂಜಿನಿಯರ್- ಬಿ.ಎಸ್ಸಿ, ಬಿಇ/ಬಿ.ಟೆಕ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಆದವರು ಅರ್ಜಿ ಸಲ್ಲಿಸಬಹುದು.
ಪ್ರೊಬೇಶನರಿ ಆಫೀಸರ್- ಎಂಬಿಎ, MSW, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್/ ಇಂಡಸ್ಟ್ರಿಯಲ್ ರಿಲೇಶನ್ಸ್/ ಪರ್ಸನಲ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ
ಪ್ರೊಬೇಶನರಿ ಅಕೌಂಟ್ಸ್ ಆಫೀಸರ್- ಸಿಎ, ಸಿಎಂಎ ಆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಪ್ರೊಬೇಶನರಿ ಎಂಜಿನಿಯರ್- 25 ವರ್ಷ
ಪ್ರೊಬೇಶನರಿ ಆಫೀಸರ್- 25 ವರ್ಷ
ಪ್ರೊಬೇಶನರಿ ಅಕೌಂಟ್ಸ್ ಆಫೀಸರ್- 30 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ.