Xiaomi ಯಿಂದ Redmi A1+ ಬಜೆಟ್ ಮೊಬೈಲ್ ಬಿಡುಗಡೆ – ಕೇವಲ 6,999 ಶುರು…
Xiaomi ಭಾರತದಲ್ಲಿ Redmi A1+ ಎಂಬ ಕಡಿಮೆ ಬೆಲೆಯ ಬೇಸಿಕ್ ಸ್ಮಾರ್ಟ್ ಪೋನ್ ಅನ್ನ ಬಿಡುಗಡೆ ಮಾಡಿದೆ. ಕೇವಲ 6,999 ಆರಂಭಿಕ ಬೆಲೆಯೊಂದಿಗೆ 4G ಮೊಬೈಲ್ ಅನಾವರಣಗೊಳಿಸಲಾಗಿದೆ.
Redmi A1+ ಎರಡು ಮಾದರಿಗಳಲ್ಲಿ ಲಭ್ಯವಿದೆ. ಅಕ್ಟೋಬರ್ 17 ರಂದು ಮಧ್ಯಾಹ್ನ 12 ಗಂಟೆಯ ನಂತರ ಮಾರಾಟ ಪ್ರಾರಂಭವಾಗಲಿದೆ. ಮೊಬೈಲನ್ನ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಖರೀದಿಸಬಹುದು. ಸ್ಮಾರ್ಟ್ಫೋನ್ ತಿಳಿ ಹಸಿರು, ಕಪ್ಪು ಮತ್ತು ತಿಳಿ ನೀಲಿ ಕಲರ್ ಗಳಲ್ಲಿ ಲಭ್ಯವಿದೆ.
3GB RAM ರೂಪಾಂತರದ ಬೆಲೆ ₹7,999
Redmi A1+, 2GB RAM ಮಾಡೆಲ್ ಅನ್ನ 6,999 ರುಪಾಯಿಗೆ ಪಡೆಯಬಹುದು. 3GB RAM ಹೊಂದಿರುವ ಮೊಬೈಲ್ ಅನ್ನ 7,999 ರುಪಾಯಿಗೆ ಖರೀದಿಸಬಹುದು. RAM ಹೊರತುಪಡಿಸಿ ಎರಡೂ ಮಾಡೆಲ್ ಗಳ Features and specifications ಒಂದೇ ರೀತಿ ಇದೆ.
ಬಳಕೆದಾರರಿಗೆ Redmi A1+ ನಲ್ಲಿ 32GB ಸ್ಟೋರೇಜ್ ಸಿಗುತ್ತದೆ. SD ಕಾರ್ಡ್ ಸಹಾಯದಿಂದ 512GB ವರೆಗೆ ಸ್ಟೋರೇಜ್ ವಿಸ್ತರಿಸಿಕೊಳ್ಳಬಹುದು. 120Hz ರಿಫ್ರೆಶ್ ರೇಟ್ ನೊಂದಿಗೆ 6.52-ಇಂಚಿನ HD + ಡಾಟ್ ಡ್ರಾಪ್ ಡಿಸ್ಪ್ಲೇ ಅಳವಡಿಸಲಾಗಿದೆ. 8MP ಡ್ಯುಯಲ್ ರಿಯರ್ ಕ್ಯಾಮೆರಾ, ಮತ್ತು ಸೆಲ್ಪೀಗಾಗಿ 5MP ಕ್ಯಾಮೆರ ಕೊಟ್ಟಿದ್ದಾರೆ. 10W ಚಾರ್ಜರ್ ಜೊತೆಗೆ 5000mAh ದೀರ್ಘಾವಧಿ ಬಾಳಿಕೆಯ ಬ್ಯಾಟರಿ ಬೆಂಬಲವಿದೆ.
ಡ್ಯುಯಲ್ ಸಿಮ್ ಸಪೋರ್ಟ್…
Redmi ಯ ಬೇಸಿಕ್ ಲೆವಲ್ ನ ಈ 4G ಸ್ಮಾರ್ಟ್ ಪೋನ್ ಡ್ಯುಯಲ್ ಸಿಮ್ ಮತ್ತು SD ಕಾರ್ಡ್ ಅನ್ನ ಸಪೋರ್ಟ್ ಮಾಡುತ್ತದೆ. ಹೆಡ್‌ಫೋನ್ ಸಂಪರ್ಕಕ್ಕಾಗಿ 3.5mm ಆಡಿಯೊ ಜಾಕ್ ಒದಗಿಸಲಾಗಿದೆ.
ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ನೊಂದಿಗೆ MediaTek Helio A22 ಪ್ರೊಸೆಸರ್ ಮೂಲಕ ಮೊಬೈಲ್ ರನ್ ಆಗುತ್ತದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಲಭ್ಯವಿದೆ.
Redmi A1+ budget mobile launched by Xiaomi – starting at just 6,999…