ಬೆಂಗಳೂರು: ಸಕಾ೯ರಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿರುವ ರೆಮಿಡಿಸ್ವಿಯರ್ ಔಷಧಿಗೆ ಕಾಳಸಂತೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸಕಾ9ರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಲು ನಿಧ9ರಿಸಲಾಗಿದೆ.
ಇಂದು ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಈಗಾಗಲೇ ಕೋವಿಡ್ ಚಿಕಿತ್ಸೆಗೆ ದರ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ನಿದಿ9ಷ್ಟ ದೂರು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿದಾ9ಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಟಾಸ್ಕ್ ಫೋರ್ಸ್ ಸಭೆಯ ನಿರ್ಣಯಗಳು..
1. ವೈದ್ಯರು ಹಾಗೂ ನರ್ಸ್‍ಗಳ ಮಾಸಿಕ ವೇತನ ಹೆಚ್ಚಳ ಮುಂದಿನ 6 ತಿಂಗಳಿಗೆ ಅನ್ವಯ
2. ನಾಲ್ಕು ಲಕ್ಷ ರ್ಯಾಪಿಡ್ ಆಂಟಿಜನ್ ಕಿಟ್ ಮತ್ತು ಐದು ಲಕ್ಷ ಕಿಟ್ ಖರೀದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
3. ಕೋವಿಡ್ ನಿವ9ಹಣೆಗೆ ಹೆಚ್ಚುವರಿ ಔಷಧ ಖರೀದಿಸಲು ಅನುಮೋದನೆ ನೀಡಲಾಗಿದೆ.
4. ರ್ಯಾಪಿಡ್ ಆಂಟಿಜನ್ ಟೆಸ್ಟ್‍ಗಳಿಗೆ ಸಂಬಂಧಿಸಿದಂತೆ ಸಕಾ9ರ ಕಳುಹಿಸುವ ರೋಗಿಗಳಿಗೆ ಎರಡು ಸಾವಿರ ರೂ. ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬಂದವರಿಗೆ ಮೂರು ಸಾವಿರ ರೂ. ಶುಲ್ಕ ನಿಗದಿಗೆ ತೀಮಾ9ನಿಸಲಾಗಿದೆ.
5. ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆ ಸಾಮಥ್ಯ9ದಲ್ಲಿ ಶೇ.50ರಷ್ಟನ್ನು ಕೋವಿಡ್ ಚಿಕಿತ್ಸೆಗಾಗಿ ಸಕಾ9ರಕ್ಕೆ ನೀಡಬೇಕು. ಉಳಿದ ಶೇ.50 ಹಾಸಿಗೆಗಳನ್ನು ಖಾಸಗಿಯವರು ಕೋವಿಡ್ ಮತ್ತು ಕೋವಿಡ್‍ಯೇತರ ರೋಗಿಗಳ ಚಿಕಿತ್ಸೆಗೆ ಬಳಸಬಹುದು.
6. ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕನಾ9ಟಕ (ಎಬಿ-ಎಆರ್‍ಕೆ) ಯೋಜನೆಯ ಪ್ಯಾಕೇಜ್ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ ವಿಧಾನಗಳನ್ನು ಯೂಸರ್ ಚಾಜ್9 ಆಧಾರದ ಮೇಲೆ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಯಿತು.
7. ಕೋವಿಡ್ ನಿವ9ಹಣೆಗೆ ವೈದ್ಯಕೀಯ ಪರಿಕರ, ಔಷಧಿ ಖರೀದಿಯ ಶಿಫಾರಸು ಮೇಲ್ವಿಚಾರಣೆಗೆ ಎಸಿಎಸ್, ಐಟಿಬಿಟಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಅನುಮೋದನೆ ನೀಡಲಾಗಿದೆ.
8. ಕೋವಿಡ್ ನಿವ9ಹಣೆಯಲ್ಲಿ ಕಾಯ9 ನಿರತರಾಗಿರುವ ಆರೋಗ್ಯ ಕಾಯ9ಕತ9ರ ಸುರಕ್ಷತೆಗಾಗಿ 2,59,263 ಎನ್-95 ಮಾಸ್ಕ್ 2,59,263 ಪಿಪಿಇ ಖರೀದಿಗೆ ಒಪ್ಪಿಗೆ ನೀಡಲಾಗಿದೆ.
9. ಕೋವಿಡ್ ನಿವ9ಹಣೆ ಉದ್ದೇಶಕ್ಕಾಗಿ 17 ಸಕಾ9ರಿ ಮೆಡಿಕಲ್ ಕಾಲೇಜುಗಳಲ್ಲಿ 4,736 ಹಾಸಿಗೆಗಳಿಗೆ ಆಕ್ಸಿಜನ್ ಪೈಪ್‍ಲೈನ್ ಅಳವಡಿಕೆ ಮತ್ತು ಇತರೆ ಅಗತ್ಯ ಪರಿಕರಗಳ ಖರೀದಿಗೆ ಅನುಮೋದನೆ ನೀಡಲಾಗಿದೆ.
10.ಆಯುಷ್ ವೈದ್ಯರಿಗೆ ನೀಡುತ್ತಿರುವ ವೇತನ 48 ಸಾವಿರಕ್ಕೆ, ಎಂಬಿಬಿಎಸ್ ವೈದ್ಯರಿಗೆ 80ಸಾವಿರ ಹಾಗೂ ನಸ್9ಗಳಿಗೆ 30 ಸಾವಿರ ರೂ.ಗಳನ್ನು ಮಾಸಿಕ ವೇತನ ನೀಡಲು ನಿಣ9ಯಿಸಲಾಗಿದೆ. ಇದು ಆರು ತಿಂಗಳಿಗೆ ಅನ್ವಯ ಆಗಲಿದೆ.
ಒಟ್ಟಾರೆ ಐದುನೂರು ಕೋಟಿ ಮೊತ್ತದ ಖರೀದಿ ಮತ್ತು ಸೌಲಭ್ಯಗಳ ಮೇಲ್ದಜೆ9 ಏರಿಕೆ ಕ್ರಮಗಳಿಗೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಸುಧಾಕರ್ ವಿವರ ನೀಡಿದ್ದಾರೆ.








