ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗುವುದನ್ನ ನಿರಾಕರಣೆ ಮಾಡಿರುವುದು ಅತ್ಯಂತ ಭಯಾನಕ: ಮಾಲಾಲಾ
ನವದೆಹಲಿ: ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗುವುದನ್ನ ನಿರಾಕರಣೆ ಮಾಡಿರುವುದು ಅತ್ಯಂತ ಭಯಾನಕ ಎಂದು ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ನೊಬೆಲ್ ಶಾಂತಿ ಪುರಸ್ಕೃತೆ, ಮಕ್ಕಳ ಹೋರಾಟಗಾರ್ತಿ ಯೂಸೂಫ್ ಮಲಾಲಾ ಟ್ವೀಟ್ ಮಾಡಿದ್ದಾರೆ.
ಕಾಲೇಜ್ಗಳು ನಮ್ಮನ್ನು ಅಧ್ಯಯನ ಮತ್ತು ಹಿಜಾಬ್ ನಡುವಿನ ಆಯ್ಕೆ ಮಾಡಲು ಒತ್ತಾಯಿಸುತ್ತಿದೆ. ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗುವುದನ್ನ ನಿರಾಕರಣೆ ಮಾಡಿರುವುದು ಅತ್ಯಂತ ಭಯಾನಕ.ಮಹಿಳೆಯರು ಬಟ್ಟೆ ಧರಿಸುವ ವಿಚಾರವಾಗಿ ಟೀಕಿಸುವ ಪ್ರಕ್ರಿಯೆ ಮುಂದುವರೆದಿದೆ.
ಹೆಣ್ಣು ಮಕ್ಕಳು ಕಡಿಮೆ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಟೀಕಿಸುವ ಸಂಪ್ರದಾಯ ನಿಲ್ಲಬೇಕು ಎಂದಿರುವ ಅವರು, ಮುಸ್ಲಿಂ ಮಹಿಳೆಯರನ್ನ ಕೀಳಾಗಿ ಕಾಣುವ ನೀತಿ ಕೊನೆಯಾಗಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹಿಜಾಬ್ – ಕೇಸರಿ ಶಾಲು ವಿವಾದ ರಾಜ್ಯವಲ್ಲದೆ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿದೆ.