ಬದುಕಿರುವಾಗಲೇ ವೃದ್ಧೆಯ ಹೆಸರಿನಲ್ಲಿ ಮರಣ ಪತ್ರ ಸೃಷ್ಠಿಸಿದ ಸಂಬಂಧಿಕರು Saaksha Tv
ಚಿಕ್ಕಮಗಳೂರು: ಆಸ್ತಿಗಾಗಿ ಬದುಕಿರುವಾಗಲೇ ವೃದ್ಧೆಯ ಹೆಸರಿನಲ್ಲಿ ಸಂಬಂಧಿಕರು ಮರಣ ಪತ್ರ ಸೃಷ್ಟಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ.
ಬಾಳೆಕೊಪ್ಪ ಸರ್ವೇ ನಂ 26 ರಲ್ಲಿರುವ 1 ಎಕರೆ 16 ಗುಂಟೆ ಜಮೀನು ವೃದ್ದೆ ಸಾರಮ್ಮನ ಹೇಸರಿನಲ್ಲಿತ್ತು. ಆದರೆ ಸಂಬಂಧಿಕರಾದ ಇ.ಟಿ.ಬಾಬು ಹಾಗೂ ಶ್ರೀಜಾ ಎಂಬುವರು ವೃದ್ದೆ ಆಸ್ತಿಯನ್ನು ಕಬಳಿಸಲು ಹೊಂಚುಹಾಕಿದ್ದರು. ಈಗ ವೃದ್ದೆ ಸಾರಮ್ಮ ಹೆಸರಿನಲ್ಲಿ ನಕಲಿ ಮರಣ ಪತ್ರ ಸೃಷ್ಟಿ ಮಾಡಿದ್ದಾರೆ.
ಈ ಮರಣ ಪತ್ರದ ಮುಖಾಂತರ ವೃದ್ದೆಯ ಜಮೀನನ್ನು ಕಬಳಿಸಿಕೊಂಡಿದ್ದಾರೆ. ನಂತರ ವೃದ್ದೆ ಆಸ್ತಿ ಕೇಳಲು ಹೋದಾಗ ಕೊಡುವುದಿಲ್ಲ ಎಂದು ಇ.ಟಿ.ಬಾಬು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ನ್ಯಾಯ ಒದಗಿಸುವಂತೆ ಮಾದ್ಯಮಗಳ ಮುಂದೆ ವೃದ್ಧೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಜಮೀನು ಕಳೆದುಕೊಂಡು ವೃದ್ಧೆ ಸಾರಮ್ಮ ಬೀದಿಗೆ ಬಿದ್ದಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಮರಣ ಪತ್ರ ಸೃಷ್ಟಿ ಮಾಡಿದ್ದು, ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದೆ.
ಇನ್ನೂ ವೃದ್ಧೆಯ ಮರಣ ಪತ್ರ ಸೃಷ್ಟಿಗೆ ಮುಂದಾದ ಸಂಬಂಧಿಕರನ್ನು ವೃದ್ದೆ ಬದುಕಿದ್ದಾರಾ ಅಥವಾ ಸಾವನ್ನಪ್ಪಿದ್ದಾರಾ ಎಂದು ಪರಿಶೀಲಿಸದೆ ತಾಲೂಕು ಅಧಿಕಾರಿಗಳು ಕೂಡ ಮರಣ ಪತ್ರ ನೀಡಿದ್ದಾರೆ. ಬದುಕಿರುವಾಗಲೇ ವೃದ್ಧೆ ಹೆಸರಿಗೆ ಮರಣ ಪತ್ರ ನೀಡಿರುವುದಕ್ಕೆ ಅಧಿಕಾರಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.