“ಲಕ್ಷ್ಮಿ ಬಾಂಬ್” ರಿಲೀಸ್ ಡೇಟ್ ಫಿಕ್ಸ್..!

ಟೈಟಲ್ ಹಾಗೂ ಪೋಸ್ಟರ್ ಟೀಸರ್ ಗಳಿಂದಲೇ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿರುವ ಚಿತ್ರ ಅಂದ್ರೆ ಅದು ಲಕ್ಷ್ಮೀ ಬಾಂಬ್. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಈ ಚಿತ್ರ ವಿಭಿನ್ನ ಕಥೆ ಹೊಂದಿದ್ದು, ಅಕ್ಷಯ್ ಚಿತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಲುತ್ತಿದ್ದಾರೆ. ಕೊರೊನಾ ಇಲ್ಲದೇ ಇದ್ದಿದ್ದರೆ ಈ ವೇಳೆಗಾಗಲೇ ಈ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ  ಕೊರೊನಾ ಕಾರಣದಿಂದ ಸಿನೆಮಾ ಮುಂದೂಡಲಾಗಿತ್ತು. ಆಗಿನಿಂದಲೂ ಅಭಿಮಾನಿಗಳು ಸಿನೆಮಾ ಯಾವಾಗ ಬಿಡುಗಡೆಯಾಗುತ್ತೆ ಎಂದೂ ತುದಿಗಾಲಿನಲ್ಲಿ ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ನಿರೀಕ್ಷೆಗೆ ತೆರಬಿದ್ದಿದೆ. ಈ ಹಾರರ್  ಚಿತ್ರ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ.  ಆದರೆ ಚಿತ್ರಮಂದಿರಗಳಲ್ಲಿ ಅಲ್ಲ ಒಟಿಟಿ ಫ್ಲಾಟ್ ಫಾರ್ಮ್ ಅಲ್ಲಿ ಚಿತ್ರ ತೆರೆಕಾಣಲಿದೆ.


ಕಾಂಚನಾ ಸಿನಿಮಾದ ರೀಮೇಕ್ ಆಗಿರುವ ಈ ಚಿತ್ರ ಸದ್ಯ ಡಿಜಿಟಲ್ ಮೀಡಿಯಾ ಅಂದ್ರೆ ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದುಮ ಶೀಘ್ರವೇ ಅಭಿಮಾನಿಗಳೆದುರು ಬರಲು ಸಜ್ಜಾಗಿದೆ.  ನವೆಂಬರ್ 9 ರಂದು   ಲಕ್ಷ್ಮಿ ಬಾಂಬ್  ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಮತ್ತೊಂದು ವಿಶೇಷ ಎಂದ್ರೆ ಈ ಸಿನೆಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಅಕ್ಷಯ್‌ ರ ಮೊದಲ ಸಿನಿಮಾವಾಗಿದೆ. ಅಕ್ಷಯ್ ಅವರೇ ಹೆಳಿರೋ ಹಾಗೆ ಈವರೆಗಿನ ಅವರ ಜೀವನದ ಅತ್ಯಂತ ಸವಾಲಿನ ಪಾತ್ರ ಇದಾಗಿದೆ. ಈ ಚಿತ್ರದಲ್ಲಿ ಅಕ್ಕಿ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ಕಾಂಚನದಲ್ಲಿ ಈ ಪಾತ್ರಕ್ಕೆ ರಾಗವ್ ಲಾರೆನ್ಸ್ ಬಣ್ಣ ಹಚ್ಚಿದ್ದರು, ಕನ್ನಡದಲ್ಲಿ ಉಪೇಂದ್ರ ನಟಿಸಿದ್ರು. ಇದೀಗ ಹಿಂದಿಯಲ್ಲಿ ಅಕ್ಷಯ್ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದು, ಪೋಸ್ಟರ್ ನಿಂದಲೇ ಕ್ಯೂರಿಯಾಸಿಟಿ ಹೆಚ್ಚಾಗಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This