ಸ್ಯಾಂಡಲ್ ವುಡ್ ನ ಖ್ಯಾತ ನಟರಲ್ಲಿ ಒಬ್ಬರಾಗಿರುವ ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶಿವಾಜಿ ಸುರತ್ಕಲ್ ಡಿಜಿಟಲ್ ಮೀಡಿಯಾದ ಮೂಲಕ ತೆರೆಗಪ್ಪಳಿಸಲು ಸಜ್ಜಾಗಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಹಲವಾರು ಚಿತ್ರಗಳು ಚಿತ್ರಮಂದಿರಗಳಲ್ಲಿ ತೆರೆಕಾಣಲು ಅಡಚಣೆ ಉಂಟಾಗಿತ್ತು. ಅದ್ರಲ್ಲಿ ಶಿವಾಜಿ ಸುರತ್ಕಲ್ ಸಹ ಒಂದು. ಲಾಕ್ ಡೌನ್ ಗೂ ಕೆಲ ದಿನಗಳ ಹಿಂದಷ್ಟೇ ಈ ಚಿತ್ರ ಚಿತ್ರಮಂದಿರಗಳಲ್ಲಿ ತೆರೆಕಂಡು , ಸಿನೆಮಾಗೆ ಪ್ರೇಕ್ಷರಿಂದ ಉತ್ತಮ ರೆಸ್ಪಾನ್ಸ್ ಸಹ ಸಿಕ್ಕತ್ತು. ಆದ್ರೆ ಕೊರೊನಾ ಹಾವಳಿಯಿಂದ ಲಾಕ್ ಡೌನ್ ಆದ ಬಳಿಕ ಚಿತ್ರಮಂದಿರಗಳು ಬಂದ್ ಆಗಿದ್ದವು.
ಆದ್ರೀಗ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಸಿನೆಮಾ ಬಿಡುಗಡೆಗೆ ತಯಾರಿ ನಡೆಸಿರುವ ಚಿತ್ರತಂಡ ಡಿಜಿಟಲ್ ಮೀಡಿಯಾದಲ್ಲಿ ಚಿತ್ರ ರಿಲೀಸ್ ಮಾಡುವ ದಿನಾಂಕವನ್ನು ಬಹಿರಂಗಪಡಿಸಿದೆ. ಶಿವಾಜಿ ಸುರತ್ಕಲ್ ಸಿನಿಮಾವು ಜೀ 5 ನಲ್ಲಿ ಆಗಸ್ಟ್ 7 ರಂದು ಪ್ರಸಾರವಾಗಲಿದೆ. ಮೊದಲಿಗೆ ಜಿ 5 ಮೂಲಕ ಡಿಜಿಟಲ್ ಮೀಡಿಯಾದಲ್ಲಿ ಬಿಡುಗಡೆ ಆಗಲಿರುವ ಸಿನಿಮಾ ನಂತರ ಜೀ ನಲ್ಲಿಯೇ ಸ್ಯಾಟಲೈಟ್ ನಲ್ಲಿ ಬಿಡುಗಡೆ ಆಗಲಿದೆ.