ಈ ಹಿಂದೆ ಕೊರೋನಾ ಪೀಡಿತ ಚೀನಾದ ವುಹಾನ್ ನಗರದಿಂದ ಏರ್‌ಲಿಫ್ಟ್ ಮೂಲಕ 600 ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿತ್ತು. ಅದರಲ್ಲಿ 406 ಜನಗಳಿಗೆ ಕೊರೊನಾ ಸೋಂಕು ಇಲ್ಲ ಎನ್ನುವುದು ಖಚಿತವಾಗಿದೆ, ಅವರು ಸೋಮವಾರ ಮನೆಗೆ ಕಳಿಸಿಕೊಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳ ಫೆ.1 ಮತ್ತು 2ರಂದು ಒಟ್ಟು 650 ಭಾರತೀಯರನ್ನು ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ವುಹಾನ್‌ನಿಂದ ಹೊಸದಿಲ್ಲಿಗೆ ಕರೆತರಲಾಗಿತ್ತು. ವೈರಸ್ ಸೋಂಕು ಪರಿಶೀಲನೆಗಾಗಿ ಹರಿಯಾಣದ ಮನೇಸರ್‌ನಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಶಿಬಿರದಲ್ಲಿ ಪ್ರತ್ಯೇಕವಾಗಿ ತಪಾಸಣೆಗೆ ಒಳಪಡಿಸಲಾಗಿತ್ತು.
ಭಾನುವಾರ 406 ಜನರ ರಕ್ತ ಮಾದರಿಯ ಅಂತಿಮ ತಪಾಸಣೆ ನಡೆಸಲಾಗಿದ್ದು, ನೆಗೆಟಿವ್ ಎಂದು ತಿಳಿದು ಬಂದಿದೆ. ಸದ್ಯ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಅವರನ್ನು ಸೋಮವಾರ ಮನೆಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕು ತಗುಲಿದ ಶಂಕೆ ಇರುವವರನ್ನು 14 ದಿನ ತೀವ್ರ ನಿಗಾದಲ್ಲಿ ಇರಿಸಿ ಮತ್ತಷ್ಟು ಚಿಕಿತ್ಸೆ ಕೊಡಿಸುವ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ.
Astro- ೧೧ ವಾರಗಳ ಸುಬ್ರಹ್ಮಣ್ಯ ಸ್ವಾಮಿ ಪೂಜಾ ವಿಧಾನ..!
ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ವ್ರತವು ಅತ್ಯಂತ ವೈಭವದಿಂದ ತುಂಬಿರುವ ಮತ್ತು ಭಕ್ತರ ಆಸೆಗಳನ್ನು ಪೂರೈಸುವ ದೈವಿಕ ಸೃಷ್ಟಿ. ಈ ಉಪವಾಸವು ಪರಮಶಿವುನಿಯ ಪುತ್ರ, ಜ್ಞಾನದಾತ ಸುಬ್ರಹ್ಮಣ್ಯ ಸ್ವಾಮಿಯ...








