2019 -20 ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್ ಗೆ ಭಾರೀ ಮೊತ್ತದ ನಷ್ಟ
ನವದೆಹಲಿ: 2019 -20 ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್ ಗೆ ಭಾರೀ ಮೊತ್ತದ ನಷ್ಟವಾಗಿದೆ. ಅನಿಲ್ ಅಂಬಾನಿ ನಿಯಂತ್ರಣದ ರಿಲಯನ್ಸ್ ಕ್ಯಾಪಿಟಲ್ನ ಅಂಗಸಂಸ್ಥೆಯಾದ ರಿಲಯನ್ಸ್ ಹೋಮ್ ಫೈನಾನ್ಸ್ ಸಂಸ್ಥೆಯ ನಿವ್ವಳ ನಷ್ಟವು 2020-21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಅಂತ್ಯಕ್ಕೆ 444.62 ಕೋಟಿ ರೂಪಾಯಿಗಳಷ್ಟಾಗಿದೆ.
2019-20ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟ 238.37 ಕೋಟಿ ರೂಪಾಯಿಗಳಷ್ಟಿತ್ತು. ಈ ಮೂಲಕ ವರಮಾನವು 281 ಕೋಟಿ ರೂಪಾಯಿಗಳಿಂದ, 162 ಕೋಟಿ ರೂಪಾಯಿಗೆ ಕುಸಿತ ಕಂಡಿದೆ. ಅಂದ್ರೆ ಶೇ 42ರಷ್ಟು ಕುಸಿತ ಕಂಡಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಇನ್ನೂ 2020-21ನೇ ಹಣಕಾಸು ವರ್ಷಕ್ಕೆ ಕಂಪನಿಯ ನಿವ್ವಳ ನಷ್ಟವು 375 ಕೋಟಿ ರೂ.ಗಳಿಂದ 1,519 ಕೋಟಿ ರೂ.ಗಳಿಗೆ 3 ಪಟ್ಟು ಹೆಚ್ಚಾಗಿದೆ. ಒಟ್ಟಾರೆ ವರಮಾನ 1,602 ಕೋಟಿ ರೂ.ಗಳಿಂದ 840 ರೂಪಾಯಿಗೆ ಇಳಿಕೆ ಕಂಡಿದೆ.