JioMart: ವಾಟ್ಸಪ್ ನಿಂದಲೇ ಆರ್ಡರ್ ಮಾಡಬಹುದು ದಿನಸಿ ಪದಾರ್ಥ…
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದೀಗ ಟೆಲಿಕಾಂ ವಲಯದಲ್ಲಿ ಮತ್ತು ಸ್ಮಾರ್ಟ್ಫೋನ್ ಮತ್ತು ರಿಟೇಲ್ ಮಾರುಕಟ್ಟೆಯಲ್ಲಿ ತನ್ನ ಹಸ್ತವನ್ನ ವಿಸ್ತರಿಸಲು ಮುಂದಾಗುತ್ತಿದೆ. ಇತ್ತೀಚೆಗೆ, ರಿಲಯನ್ಸ್ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) 2022ರಲ್ಲಿ ದೀಪಾವಳಿಗೆ 5G ನೆಟ್ವರ್ಕ್ ತರುವುದಾಗಿ ಘೋಷಿಸಿತ್ತು. ಇದರೊಂದಿಗೆ ಕಂಪನಿ ಚಿಲ್ಲರೆ ಮಾರುಕಟ್ಟೆಯಲ್ಲೂ ತನ್ನ ಜಾಲವನ್ನ ವಿಸ್ತರಿಸಲು ಮುಂದಾಗಿದೆ.
ಈ ಭಾರಿ Jio WhatsApp ಸಂಖ್ಯೆಯ ಮೂಲಕ Jio Mart ನಿಂದ ಶಾಪಿಂಗ್ ಮಾಡುವ ಸೌಲಭ್ಯವನ್ನು ಘೋಷಿಸಿದೆ. ಹೌದು, ನೀವೀಗ ಜಿಯೋ ಮಾರ್ಟ್ನಿಂದ ದಿನಸಿ ಪದಾರ್ಥಗಳನ್ನ WhatsApp ಚಾಟ್ ಮೂಲಕ ಶಾಪಿಂಗ್ ಮಾಡಬಹುದು.
ರಿಲಯನ್ಸ್ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇಶಾ ಅಂಬಾನಿ ಅವರನ್ನು ರಿಲಯನ್ಸ್ನ ರಿಟೇಲ್ ವ್ಯಾಪಾರದ ಮುಖ್ಯಸ್ಥರನ್ನಾಗಿ ಪರಿಚಯಿಸಿತು. ಅಂದಿನಿಂದ, ರಿಲಯನ್ಸ್ ಕಂಪನಿಯು ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯವಹಾರದತ್ತ ಗಮನಹರಿಸಲಿದೆ ಎಂಬ ಊಹಾಪೋಹಗಳಿವೆ. ಅದೇ ಸಮಯದಲ್ಲಿ, ರಿಲಯನ್ಸ್ ರಿಟೇಲ್ ಕೂಡ ಒಂದು ವರ್ಷದಲ್ಲಿ ದೇಶಾದ್ಯಂತ 2500 ಹೊಸ ಮಳಿಗೆಗಳನ್ನು ತೆರೆಯಲು ತಯಾರಿ ನಡೆಸುತ್ತಿದೆ.
ವಾಟ್ಸಾಪ್ನಿಂದ ಸರಕುಗಳನ್ನ ಆರ್ಡರ್ ಮಾಡಿ
WhatsApp ನಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡಲು, ನೀವು Jio Mart ನ WhatsApp ಸಂಖ್ಯೆಯನ್ನು (+917977079770) ಸೇವ್ ಮಾಡಿಕೊಳ್ಳಬೇಕು ನಂತರ ಅದರಲ್ಲಿ ಹಾಯ್ ಸಂದೇಶವನ್ನು ಕಳುಹಿಸಬೇಕು.
ಇದರ ನಂತರ ರಿಪ್ಲೆಯಲ್ಲಿ ಅನೇಕ ಕೆಟಗರಿಗಳ ಆಯ್ಕೆಗಳನ್ನು ನೋಡುತ್ತೀರಿ.
ನೀವು ನಿಮ್ಮ ಕೆಟಗರಿಯನ್ನ ಆಯ್ಕೆ ಮಾಡಿ ಅದರಿಂದ ದಿನಸಿ ವಸ್ತುಗಳನ್ ಆಯ್ಕೆ ಮಾಡಿಕೊಳ್ಳಬೇಕು.
ಇದರ ನಂತರ ನೀವು ದಿನಸಿ ವಸ್ತುಗಳನ್ನು ಆರ್ಡರ್ ಮಾಡಬಹುದು ಮತ್ತು WhatsApp ಸಹಾಯದಿಂದ ಹಣ ಪಾವತಿ ಮಾಡಬಹುದು.








