ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ 5 ವರ್ಷಗಳವರೆಗೆ ‘ಉದ್ಯೋಗಿಯ ಸಂಬಳ’ ಘೋಷಿಸಿದ ರಿಲಯನ್ಸ್..!
ಮುಂಬೈ: ದೇಶದಲ್ಲಿ ಕೊರೊನಾ ಹಾವಳಿಯಿಂದಾಗಿ ಸಾವು ನೋವಿನ ಸಂಖ್ಯೆಗಳು ಹೆಚ್ಚಾಗಿದೆ.. ಈ ನಡುವೆ ರಿಲಯನ್ಸ್ ಕಂಪನಿಯು ತಮ್ಮ ಸಂಸ್ಥೆಯ ಉದ್ಯಮಿಗಳು ಕೋವಿಡ್ ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ಆ ಉದ್ಯೋಗಿಯ ಸಂಬಳವನ್ನ 5 ವರ್ಷಗಳವರೆಗೂ ನೀಡುವುದಾಗಿ ಘೋಷಣೆ ಮಾಡಿಕೊಂಡಿದೆ.
ಹೌದು.. ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಉದ್ಯೋಗಿಗಳಿಗೆ ಪತ್ರ ಬರೆಯುವ ಮೂಲಕ ಈ ಬಗ್ಗೆ ಮಾಹಿತಿ ನೀಡಿ ಉದ್ಯೋಗಿಗಳಿಗೆ ಧೈರ್ಯ ತುಂಬಿದ್ದಾರೆ. ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವ್ಯಕ್ತಿ ಕೋವಿಡ್‍ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 10 ಲಕ್ಷ ರೂ ನೀಡಲು ರಿಲಯನ್ಸ್ ನಿರ್ಧರಿಸಿದೆ. ಸಾವನ್ನಪ್ಪಿದ ಉದ್ಯೋಗಿಯ ನಾಮಿನಿಗೆ 10 ಲಕ್ಷ ಹಣವನ್ನು ನೇರವಾಗಿ ಪಾವತಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಲಿದೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.
ಪತ್ರದಲ್ಲಿ ‘ಸಾವನ್ನಪ್ಪಿದ ಉದ್ಯೋಗಿಯ ಕೊನೆಯದಾಗಿ ಪಡೆದ ವೇತನವನ್ನು ಐದು ವರ್ಷಗಳ ಕಾಲ ಕುಟುಂಬಕ್ಕೆ ನೀಡಲಾಗುವುದು. ಮಕ್ಕಳು ಪದವಿ ಪಡೆಯುವವರೆಗೂ ಕುಟುಂಬದ ಪೋಷಕರು, ಹೆಂಡತಿ ಅಥವಾ ಗಂಡ ಹಾಗೂ ಮಕ್ಕಳ ಆರೋಗ್ಯ ವಿಮೆಯನ್ನು ಶೇ.100ರವರೆಗೆ ಭರಿಸಲಾಗುವುದು.
ರಿಲಯನ್ಸ್ ಸಂಸ್ಥೆಗೆ ನಮ್ಮ ಸಹೋದ್ಯೋಗಿಗಳ ಕೊಡುಗೆ ಅಪಾರವಾಗಿದೆ. ಈಗಾಗಲೇ ಉದ್ಯೋಗಿಗಳಿಗೆ ಉಚಿತ ಲಸಿಕೆ ಅಭಿಯಾನ ನಡೆಸಲಾಗಿದೆ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ’ ಎಂದು ಬರೆದು ಉದ್ಯೋಗಿಗಳ ಆತ್ಮಸ್ಥೈರ್ಯವನ್ನ ಹೆಚ್ಚಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.