ರೈಲ್ವೆ ಇಲಾಖೆಯ ಜಾಗ : 179 ಕಡೆ ದೇಗುಲ, ಮಸೀದಿ, ದರ್ಗಾಗಳ ನಿರ್ಮಾಣ..!
ನವದೆಹಲಿ: ದೇಶದಾದ್ಯಂತ ರೈಲ್ವೆ ಇಲಾಖೆಯ ಆಸ್ತಿಯಲ್ಲಿ 179 ಕಡೆ ಅಕ್ರಮವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಯಾಗಿದೆ.. ಈ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಕಟ್ಟಡಗಳಲ್ಲಿ ದೇವಸ್ಥಾನ, ದರ್ಗಾಗಳು, ಮಸೀದಿಗಳು ಸೇರಿವೆ. ಹಲವು ರ‍್ಷಗಳಿಂದ ಇವು ಅಸ್ತಿತ್ವದಲ್ಲಿವೆ ಎಂದು ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದೇ ವೇಳೇ ಅಕ್ರಮ ನರ‍್ಮಾಣದ ಈ ಸಂಕರ‍್ಣಗಳ ತೆರವಿಗೆ ರೈಲ್ವೆ ಆಡಳಿತ ಮುಂದಾಗಿದೆ. ಇದಕ್ಕಾಗಿ ರೈಲ್ವೆ ಸುರಕ್ಷತಾ ದಳ (ಆರ್‌ಪಿಎಫ್), ಸ್ಥಳೀಯ ಆಡಳಿತ ಮತ್ತು ಸರ್ಕಾರಗಳ ನೆರವು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಅಕ್ರಮ ನರ‍್ಮಾಣಗಳಿಂದ ಇನ್ನಷ್ಟು ಭೂಮಿ ಅತಿಕ್ರಮಣವಾಗದಂತೆಯೂ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ಇವುಗಳನ್ನು ತೆರವುಗೊಳಿಸಲು ರೈಲ್ವೆ ಇಲಾಖೆಯು ಮುಂದಾಗಿದ್ದರೂ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ತೆರವುಗೊಳಿಸಲು ರಾಜ್ಯ ರ‍್ಕಾರಗಳ ನೆರವು ಹಾಗೂ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಧರ‍್ಮಿಕ ಕೇಂದ್ರಗಳ ಪ್ರಮುಖರ ಜೊತೆಗೆ ಸೌಹರ‍್ದಯುತವಾಗಿ ರ‍್ಚಿಸಿ ನರ‍್ಮಾಣಗಳನ್ನು ಸ್ಥಳಾಂತರಗೊಳಿಸಲು ಯತ್ನಿಸಲಾಗುತ್ತಿದೆ. ಹಾಗೂ ಹೊಸದಾಗಿ ಇಂತಹ ಯಾವುದೇ ನರ‍್ಮಾಣಗಳು ರೈಲ್ವೆ ಇಲಾಖೆಗೆ ಸೇರಿದ ಭೂಮಿಯಲ್ಲಿ ತಲೆಎತ್ತದಂತೆ ಇಲಾಖೆಯು ಎಚ್ಚರಿಕೆ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.