ಉಗ್ರರ ತವರು ಪಾಕಿಸ್ತಾನದಲ್ಲಿ ಉಗ್ರರಿಂದ ದಾಳಿ – ಇಬ್ಬರು ಪಾಕ್ ಸೈನಿಕರು ಹತ
ಪಾಕಿಸ್ತಾನ : ಉಗ್ರರ ತವರು ಪಾಕಿಸ್ತಾನದ ದಕ್ಷಿಣ ಮತ್ತು ಉತ್ತರ ವಾಜಿರಿಸ್ತಾನದ ಜಿಲ್ಲೆಗಳಲ್ಲಿ ಮೂರು ಭದ್ರತಾ ತಾಣಗಳ ಮೇಲೆ ಉಗ್ರರು ಗುಂಡುಹಾರಿಸಿದ್ದು, ಪಾಕ್ ನ ಇಬ್ಬರು ಯೋಧರು ಮೃತಪಟ್ಟಿದ್ದಾರೆ.. ಘಟನೆಯಿಂದಾಗಿ 9 ಯೋಧರು ಗಾಯಗೊಂಡಿದ್ದು, ಆಸ್ಪತ್ರೆಎಗೆ ದಾಖಲಾಗಿ ಚಿಕಿತ್ಸೆ ಪಡೆಎಯುತ್ತಿದ್ದಾರೆ.
ದಕ್ಷಿಣ ವಾಜಿರಿಸ್ತಾನದ ಶಾವಾಲ್ ವಲಯದಲ್ಲಿ ಮೊದಲಿಗೆ ದಾಳಿ ನಡೆದಿದ್ದು, ಒಬ್ಬ ಯೋಧ ಮೃತಪಟ್ಟು ಇತರೆ ಇಬ್ಬರು ಗಾಯಗೊಂಡರು. ದಕ್ಷಿಣ ವಾಜಿರಿಸ್ತಾನದ ಜಿಲ್ಲೆಯ ಎರಡು ಕಡೆ ದಾಳಿ ನಡೆದಿದ್ದು ಒಬ್ಬ ಯೋಧರು ಮೃತಪಟ್ಟಿದ್ದು, ಇತರೆ ಏಳು ಮಂದಿ ಗಾಯಗೊಂಡರು. ವರದಿ ಪ್ರಕಾರ, ಸುಧಾರಿತ ಸ್ಫೋಟಕ ಸಾಧನವನ್ನು ಬಳಸಲಾಗಿತ್ತು. ಲಾಧಾ ಬಳಿ ಭದ್ರತಾ ಸಿಬ್ಬಂದಿ ಕೂಡಾ ಪ್ರತಿರೋಧ ತೋರಿ ಗುಂಡು ಹಾರಿಸಿದರು ಎಂದು ಮೂಲಗಳು ತಿಳಿಸಿವೆ.