ಬೀದರ್ ನಲ್ಲಿ ರೆಮೆಡಿಸಿವಿರ್ ಅಕ್ರಮ ಮಾರಾಟ : ಇಬ್ಬರ ಬಂಧನ
ಬೀದರ್ : ನಗರದಲ್ಲಿ ಅಕ್ರಮವಾಗಿ ರೆಮ್ಡಿಸಿವಿಆರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ನಗರದ ಮನಿಯಾರ್ ತಾಲೀಮ್ನ ಅಬ್ದುಲ್ ಶೇಖ್ ಹಾಗೂ ಮಂದಕನಳ್ಳಿಯ ಮಹ್ಮದ್ ವಸೀಮ್ ಬಂಧಿತ ಆರೋಪಿಗಳಾಗಿದ್ದಾರೆ.
ಇವರು ನಗರದ ಓಲ್ ಸಿಟಿಯಕೋಟಿ ಹತ್ತಿರ ಕಾಳಸಂತೆಯಲ್ಲಿ ಒಂದು ಲರೆಮ್ಡಿಸಿವರ್ ಇಂಜೆಕ್ಷನ್ 23 ಸಾವಿರಕ್ಕೆ ಮಾರಾಟ ಮಾಡುವ ವೇಳೆ ಪೊಲೀಸರು ದಾಳಿ ನಡೆಸಿ ಅರೆಸ್ಟ್ ಮಾಡಿದ್ದಾರೆ.
ಈ ವೇಳೆ ಪೊಲೀಸರು ಇಂಜೆಕ್ಷನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.