ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಸೈಂಟ್ ಮಾರ್ಕ್ಸ್ ಕೆಥೆಡ್ರೆಲ್ನಲ್ಲಿ ನವೆಂಬರ್ 12ರಂದು ಮೊದಲ ಮಹಾ ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಸೈನಿಕರ ನೆನಪಿನಾರ್ಥ ಸ್ಮರಣಾರ್ಥ ದಿನಾಚರಣೆಯನ್ನು ರೆವರೆಂಡ್ ಡಾ. ವಿನ್ಸೆಂಟ್ ವಿನೋದ್ ಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ವರಣಾರ್ಥ ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಏರ್ ಮಾರ್ಷಲ್ ಫಿಲಿಪ್ ರಾಜಕುಮರ್ ಹುತಾತ್ಮರ ಕುರಿತು ಮಾತನಾಡಿದರು.
ಕರ್ತವ್ಯ ಪಥದಲ್ಲಿ ಮಾತೃಭೂಮಿಯ ರಕ್ಷಣೆಗಾಗಿ ಹೆಚ್ಚಿನ ಭಾರತೀಯ ಸೈನಿಕ ಪಡೆಗಳು ಮೊದಲ ಯುದ್ಧದಲ್ಲಿ ಭಾಗವಹಿ ಸಾವಿರಾರು ಸೈನಿಕರು ಬಲಿದಾನವನ್ನು ನೀಡಿದರು ಹಾಗೂ ಸಾಕಷ್ಟು ಸೈನಿಕರು ತಮ್ಮ ತವರಿಗೆ ವಾಪಸ್ಸಾಗಲಿಲ್ಲ. ಇವರ ನೆನಪಿನಾರ್ಥ ಸೈಂಟ್ ಮಾರಕ್ಸ್ ಕೆಥಡ್ರೆಲ್ನ ಪರವಾಗಿ ಕಾರ್ಯಕ್ರಮಕ್ಕೆ ಹುತಾತ್ಮರ ಸಂಬಂಧಿಕರು ಹಾಗೂ ಭಾರತೀಯ ಸೈನ್ಯದ ಉನ್ನತ ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು.
ಸೈನ್ಯದ ವಿವಿಧ ವಿಭಾಗದ ಹಲವು ಅಧಿಕಾರಿಗಳು, ಟ್ರೈನಿಂಗ್ ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್, ಕರ್ನಾಟಕ ಮತ್ತು ಕೇರಳದ ಜೆನರಲ್ ಆಫೀಸರ್ ಕಮಾಂಡಿಂಗ್, ವಿವಿಧ ಹಿರಿಯ ಸೇನಾಧಿಕಾರಿಗಳು, ಅಧಿಕಾರಿಗಳು ವಿವಿಧ ಸಂಘಗಳು ಹಾಗೂ ಸೇವಾ ಸಂಸ್ಥೆಗಳು ಕಾರ್ಯಾಕ್ರಮದ ಭಾಗವಾಗಿದ್ದರು.
ಏರ್ ಮಾರ್ಷಲ್ ರಾಜಕುಮಾರ್ ಮಾತನಾಡಿ ದೇಶದ ರಕ್ಷಣೆಯಲ್ಲಿ ಹಾಗೂ ಮೊದಲ ಹಾಗೂ ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಅತಿ ದೊಡ್ಡ ಕೊಡುಗೆಯನ್ನು ಸ್ಮರಸಿದರು. ರೆವರೆಂಡ್ ಡಾ. ವಿನ್ಸೆಂಟ್ ರವರು ಮಾತನಾಡಿ ವಿಶ್ವದಲ್ಲಿ ಯುದ್ಧವನ್ನು ಕೊನೆಗೊಳಿಸಿ ಶಾಂತಿ ಮೂಡಿಸುವಲ್ಲಿ ಪ್ರಯತ್ನಗಳಾಗಬೇಕೆಂದು ಕರೆ ನೀಡಿದರು.