Remove Stretch Marks – ಪ್ರೆಗ್ನೆನ್ಸಿ ನಂತರದ ಸ್ಟ್ರೆಚ್ ಮಾರ್ಕ್ಸ್ ತೊಲಗಿಸಲು ಈ ವಿಧಾನಗಳನ್ನ ಟ್ರೈ ಮಾಡಿ..
ಗರ್ಭಾವಸ್ಥೆ ಎನ್ನುವುದು ಮಹಿಳೆಗೆ ಆಹ್ಲಾದಕರ ಭಾವನೆಯನ್ನ ನೀಡುತ್ತದೆ. ಆದರೆ ಇದರೊಂದಿಗೆ ಕೆಲವು ದೈಹಿಕ ಮತ್ತು ಮಾನಸಿಕ ತೊಂದರೆಗಳೂ ಸಹ ಬರುತ್ತವೆ. ಅದರಲ್ಲಿ ಒಂದು ದೇಹದ ಮೇಲೆ ಬೀಳುವ ಸ್ಟ್ರೆಚ್ ಮಾರ್ಕ್ಸ್. ಸಮಯಕ್ಕೆ ಸರಿಯಾಗಿ ಇದರ ಮೇಲೆ ಉಪಚಾರ ಕೈಗೊಳ್ಳದಿದ್ದರೆ ಈ ಸ್ಟ್ರೆಚ್ ಮಾರ್ಕ್ಸ್ ಬೇಗನೆ ಹೋಗುವುದಿಲ್ಲ.
ಮಗು ಗರ್ಭದಲ್ಲಿ ಬೆಳೆದಾಗ, ಕಿಬ್ಬೊಟ್ಟೆಯ ಸ್ನಾಯುಗಳು ಹಿಗ್ಗುತ್ತವೆ. ಇದರಿಂದಾಗಿ ಚರ್ಮದಲ್ಲಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಸ್ಟ್ರೆಚ್ ಮಾರ್ಕ್ಸ್ ಗಳನ್ನ ಕೆಲವು ಮನೆ ಮದ್ದಿನಿಂದ ತೆಗೆದುಹಾಕಬಹುದು.

ಕೆಲವೊಮ್ಮೆ ಸ್ಟ್ರೆಚ್ ಮಾರ್ಕ್ಸ್ ಹೊಟ್ಟೆಯ ಮೇಲೆ ಮಾತ್ರವಲ್ಲ. ತೊಡೆ, ಕೈಗಳ ಮೇಲಿನ ಭಾಗ ಅಥವಾ ಸೊಂಟದ ಸುತ್ತಲಿನ ಪ್ರದೇಶದಲ್ಲಿಯೂ ಕಂಡುಬರುತ್ತದೆ. ನೀವು ಆ ಸ್ಟ್ರೆಚ್ ಮಾರ್ಕ್ಸ್ಗಳನ್ನ ತೊಡೆದುಹಾಕಲು ಬಯಸಿದರೆ ಈ ಟಿಪ್ಸ್ ಓದಿ..
- ಒಂದು ಚಮಚ ನಿಂಬೆ ರಸಕ್ಕೆ ಅಡಿಗೆ ಸೋಡಾ ಮಿಶ್ರಣ ಮಾಡಿ ಮತ್ತು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ. ಮೆಲ್ಲಗೆ ಅದರ ಮೇಲೆ ಸ್ಕ್ರಬ್ ಮಾಡಿ ಹಾಗೇ ಬಿಡಿ. ನಂತರ ಹತ್ತರಿಂದ ಹದಿನೈದು ನಿಮಿಷ ಬಿಟ್ಟು ತೊಳೆದುಕೊಳ್ಳಿ. ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಈ ರೀತಿ ಮಾಡುವುದರಿಂದ, ಕೆಲವೇ ದಿನಗಳಲ್ಲಿ ಪರಿಣಾಮ ಕಾಣಬಹುದು. ಏಕೆಂದರೆ ನಿಂಬೆ ಮತ್ತು ಅಡಿಗೆ ಸೋಡಾ ಬ್ಲೀಚಿಂಗ್ ಅಂಶಗಳನ್ನು ಒಳಗೊಂಡಿದೆ. ಇದು ಚರ್ಮದ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಒರಿಜಿನಲ್ ಶ್ರೀಗಂಧವನ್ನ ಪುಡಿ ಮಾಡಿ ಅದಕ್ಕೆ ಅರಿಶಿನ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಸ್ಟ್ರೆಚ್ ಮಾರ್ಕ್ಸ್ ಮೇಲೆ ಈ ಪೇಸ್ಟ್ ಹಚ್ಚಿ ಒಣಗಲು ಬಿಡಿ. ಈ ಪೇಸ್ಟ್ ಒಣಗಿದ ಮೇಲೆ ಅದನ್ನು ತೊಳೆಯಿರಿ. ಇದರ ನಿರಂತರ ಬಳಕೆಯಿಂದ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆ ದೂರವಾಗುವುದು.
- ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ಸ್ ಬರಲಾರಂಭಿಸಿದ್ದರೆ ಅದರ ಮೇಲೆ ಎಣ್ಣೆ ಮಸಾಜ್ ಮಾಡುವುದು ತುಂಬಾ ಪರಿಣಾಮಕಾರಿ. ಏಕೆಂದರೆ ಎಣ್ಣೆಯ ಸಹಾಯದಿಂದ ಚರ್ಮ ತೇವಾಂಶ ಮತ್ತು ಪೋಷಣೆಯನ್ನ ಪಡೆಯುತ್ತದೆ. ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ ದಿನಕ್ಕೆ ಕನಿಷ್ಠ ಎರಡು ಬಾರಿ ಮಸಾಜ್ ಮಾಡುವುದರಿಂದ ಸ್ಟ್ರೆಚ್ ಮಾರ್ಕ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
- ಅಲೋವೆರಾ ಜೆಲ್ ನೈಸರ್ಗಿಕವಾಗಿ ಸುಕ್ಕುಗಳನ್ನ ತೆಗೆದುಹಾಕಲು ಕೆಲಸ ಮಾಡುತ್ತದೆ. ಹೊಟ್ಟೆಯ ಮೇಲಿನ ಸ್ಟ್ರೆಚ್ ಮಾರ್ಕ್ಸ್ ತೆಗೆದುಹಾಕಲು ಅಲೋವೆರಾ ಜೆಲ್ ಅನ್ನು ಪ್ರತಿದಿನ ಬಳಿಸಿ ಮಸಾಜ್ ಮಾಡುವುದರಿಂದ ಕೆಲವೇ ದಿನಗಳಲ್ಲಿ ಗುರುತುಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.
Remove Stretch Marks – How To Remove Stretch Marks After Delivery Home Remedies In kannada







