ಬ್ರಾಹ್ಮಣರ ಅವಹೇಳನ ಪಠ್ಯ ತೆಗೆದು ಹಾಕಿ : ಸುರೇಶ್ ಕುಮಾರ್ ಸೂಚನೆ
ಬೆಂಗಳೂರು : ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಬಹುದಾದ ಪಠ್ಯಭಾಗವನ್ನು ಕೈಬಿಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಸಚಿವರು ತಮ್ಮ ಪ್ರಕಟನೆಯಲ್ಲಿ ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಾಠ-7ರ ಅಂಶಗಳನ್ನು ಉಲ್ಲೇಖಿಸಿ ಈ ಪಠ್ಯಭಾಗ ಬ್ರಾಹ್ಮಣ ಜನಾಂಗದ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂಬ ವರದಿಗಳ ಹಿನ್ನೆಲೆ ಗುರುವಾರವೇ ಈ ಸಂಕೀರ್ಣ ಪಠ್ಯಭಾಗವನ್ನು ತಕ್ಷಣದಿಂದಲೇ ಕೈಬಿಡುವಂತೆ ಸೂಚಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯಪುಸ್ತಕವೊಂದರಲ್ಲಿ ಬ್ರಾಹ್ಮಣ ಜಾತಿಯ ಅವಹೇಳನ ಮಾಡಲಾಗಿದೆ ಎಂಬರ್ಥದ ವರದಿಗಳು ದಿನಾಂಕ 18.12.2020 ಗುರುವಾರದ ಪ್ರತಿಕೆಗಳಲ್ಲಿ ಪ್ರಟಕವಾಗಿದೆ. ಇದು ಆರನೇ ತರಗತಿ ಸಮಾಜ ವಿಜ್ಞಾನ ಭಾಗ 1ರ ಪಾಠ-7ರ ಅಂಶಗಳನ್ನು ಉಲ್ಲೇಖಿಸಿದ ವರದಿಯಾಗಿದೆ. ಆ ಪಾಠದಲ್ಲಿ ಹೊಸ ಧರ್ಮಗಳಲ್ಲಿ ಉದಯದ ಕಾಣರವನ್ನು ವಿವರಿಸುತ್ತಾ ‘ಸಂಸ್ಕøತ ಪರೋಹಿತ ಭಾಷೆಯಾದ್ದರಿಂದ ಜನಸಾಮಾನ್ಯತಿಗ ಅರ್ಥವಾಗುತ್ತಿರಲಿಲ್ಲ. ಯಾಗ ಯಜ್ಞಗಳಲ್ಲಿ ಆಹಾರ ಧಾನ್ಯ ಹಾಲು ತುಪ್ಪಗಳನ್ನು ಹವಿಸ್ಸಿನಿ ರೂಪದಲ್ಲಿ ದಹಿಸಲಾಗುತ್ತಿತ್ತು. ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿತ್ತು. ಇದರಿಂದಾಗಿ ಆಹಾರದ ಅಭಾವ ಸೃಷ್ಠಿಯಾಗುತ್ತಿತ್ತು. ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲಾಗುತ್ತಿದ್ದ ಪುರೋಹಿತ ವರ್ಗ ಹಲವು ಸವಲತ್ತುಗಳನ್ನು ಹೊಂದಿದ್ದರು. ಇದೇ ಸಂದರ್ಭದಲ್ಲಿ ಕ್ಷತ್ರಿಯರು ಕೂಡ ಪ್ರಬಳ್ಯಕ್ಕೆ ಬರಲಾಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಉದಯವಾಗ ಹಲವು ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು. ಇವೆಲ್ಲದರ ಪರಿಣಾಮವಾಗಿ ಉದುಇಸಿದ ಧರ್ಮಗಳ ಪೈಕಿ ಜೈನ ಮತ್ತು ಬೌಧ್ಧ ಧರ್ಮಗಳು ಪ್ರಮುಖವಾದವು. ಎಂಬ ಅರ್ಥದ ಪರಿಚಯ ಪಠ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಈ ಪೀಠಿಕೆಯ ಅನಗತ್ಯ ಹಾಗೂ ಆ ತರಗತಿಯ ಮಕ್ಕಳ ಮಯೋಮಾನಕ್ಕೆ ಮೀರಿದ ಪಠ್ಯ ಭೋಧನೆಯಾಗಿದೆ ಎನ್ನುವುದು ಬಹುಜನರ ಅಭಿಪ್ರಾಯವಾಗಿದೆ.
ಇದೇ ತರಗತಿಯ ಪಾಠ ಆರಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಕುರಿತಾದ ಪಠ್ಯದಲ್ಲಿ ಈ ಧರ್ಮಗಳ ಕುರಿತಾದ ಪರಿಷಯ ಪ್ರಯತ್ನದಲ್ಲಿ ಬೇರಾವುದೇ ಜಾತಿ ಕುರಿತ ಅವಹೇಳನಾಕಾರಿಯಾದ ಪೀಠಿಕಾ ಸ್ವರೂಪದ ಪರಿಚಯವನ್ನು ನೀಡಲ್ಲ. ಹಾಗಾಗಿ ಈ ರೀತಿಯ ಪ್ರಚೋದನಾಕಾರಿಯಾದ ಪರಿಚಯಗಳನ್ನು ಸಮಾಜದಲ್ಲಿ ಗೊಂದಲ ಮೂಡಿಸುವುದಲ್ಲದೇ ಯಾವುದೇ ಒಂದು ನಿರ್ದಿಷ್ಠ ಸಮಾಜ/ ಜಾತಿ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ ಹಾಗಾಗುತ್ತದೆ.
ಈ ಕುರಿತು ಇಂದೇ ಅಗತ್ಯ ಸುತ್ತೋಲೆ ಹೊರಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಯುಕ್ತರಿಗೆ ಸೂಚಿಸಿ ಟಿಪ್ಪಣಿ ನೀಡಲಾಗಿದೆ. ಇಲಾಖೆಯ 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ, ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಇಂತಹ ಯಾವುದೇ ಸಂಕೀರ್ಣ ವಿಷಯಗಳ ಕುರಿತು ಶಿಕ್ಷಕರು ಮತ್ತು ವಿಷಯ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಅವರಿಂದ ವರದಿ ಪಡೆದು 15 ದಿನಗಳಲ್ಲಿ ವರದಿ ಸಲ್ಲಿಸಬೇಕೆಂದೂ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ವರದಿ ಪಡೆದ ನಂತರ ವರದಿಯಲ್ಲಿ ಅಂತಹ ಪಠ್ಯಭಾಗಗಳಿದ್ದರೆ ಅದರ ಪರಾಮರ್ಶೆಗೆ ತಜ್ಞ ಸಮಿತಿ ನೇಮಕ ಮಾಡಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel