ರೆನಾಲ್ಟ್ ಇಂಡಿಯಾ ಕಿಗರ್ SUV ಬಿಡುಗಡೆ: ವಿಶೇಷತೆಗಳು..!
ದೇಶದಲ್ಲಿ ಬಹುನಿರೀಕ್ಷಿತ ಕಿಗರ್ ಸಬ್ ಕಾಂಪ್ಯಾಕ್ಟ್ SUV ಯನ್ನು ಆರಂಭಿಕ ಬೆಲೆಗೆ 5.45 ಲಕ್ಷಕ್ಕೆ ರೆನಾಲ್ಟ್ ಇಂಡಿಯಾ ಬಿಡುಗಡೆ ಮಾಡಿದೆ. ಇಂದಿನಿಂದ SUV ಗಾಗಿ ಬುಕಿಂಗ್ ತೆರೆದಿದ್ದು, 11,000 ರೂ.ಗಳ ಬೆಲೆಯಲ್ಲಿ ಕಾಯ್ದಿರಿಸುವ ಅವಕಾಶವನ್ನ ಕಂಪನಿಯು ಒದಗಿಸಿದೆ. ರೆನಾಲ್ಟ್ ಕಿಗರ್ ಅನ್ನು 4 ರೂಪಾಂತರಗಳಲ್ಲಿ ಕಂಪನಿಯು ಪರಿಚಯಿಸಿದೆ.
RXE, RXL, RXT, RXZ ರೂಪಾಂತರಗಳಲ್ಲಿ ಕಿಗರ್ ಪರಿಚಯಿಸಲಾಗಿದೆ. ಅದರ ಟಾಪ್ ವೇರಿಯಂಟ್ 9.55 ಲಕ್ಷ ರೂ., ಆಗಿದ್ದು ಡ್ಯುಯಲ್ ಟೋನ್ ರೂಪಾಂತರವು ಹೆಚ್ಚುವರಿ ಬೆಲೆ 17,000 ರೂ. ಹೊಂದಿದೆ.
ಸಿಲಿಕಾನ್ ಸಿಟಿಗೆ ಎದುರಾಗಬಹುದಾ ಮತ್ತೊಂದು ಮಹಾ ಕಂಟಕ..!
ವೈಶಿಷ್ಠ್ಯತೆಗಳು
ಈ ಹೊಸ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5 -ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಆರ್ಮ್ ರೆಸ್ಟ್ ಕೆಳಭಾಗದಲ್ಲಿ 7.5 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಬಾಕ್ಸ್ ನೀಡಲಾಗಿದೆ. ಹೊಸ ಕಿಗರ್ ನ ಸ್ಟೀರಿಂಗ್ ವೀಲ್ನಲ್ಲಿ ಇನ್ಫೋಟೈನ್ಮೆಂಟ್ ಸೇರಿದಂತೆ ಹಲವಾರು ನಿಯಂತ್ರಣ ಬಟನ್ ಗಳನ್ನು ಒದಗಿಸಲಾಗಿದೆ. ಅಲ್ಲದೆ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಸಪೋರ್ಟ್, ವಾಯ್ಸ್ ಕಮಾಂಡ್, ಆರ್ಕಾಮಿಸ್ ಆಡಿಯೊ ಸಿಸ್ಟಮ್ ಹೊಂದಿರುವ 4 ಸ್ಪೀಕರ್ಗಳು ಮತ್ತು 4 ಟ್ವೀಟರ್ಗಳು, ಕೀಲಿ ರಹಿತ ಎಟಂಟ್ರಿ, ಪುಶ್ ಬಟನ್ ಸ್ಟಾರ್ಟ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಆಂಬಿಯೆಂಟ್ ಲೈಟಿಂಗ್, ಪಿಎಂ 2.5 ಏರ್ ಫಿಲ್ಟರ್ ನೀಡಲಾಗುವುದು.
ಆಪಲ್ ಕಾರ್ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ, ಸೆಂಟ್ರಲ್ ಎಸಿ ವೆಂಟ್ಸ್, ಇನ್ಪೋಟೈನ್ಮೆಂಟ್ ಸಿಸ್ಟಂ ನಿಯಂತ್ರಣ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್ ಸೌಲಭ್ಯವಿದೆ.