ಖ್ಯಾತ ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು
ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಭುಜದ ಶಸ್ತ್ರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದಾರೆ. ಹಲವು ದಿನಗಳಿಂದ ಬಾಲಕೃಷ್ಣ ಅವರು ಭುಜದ ನೋವಿಗೆ ಒಳಗಾಗಿದ್ದರು, ಆದರೆ ಆಖಂಡ ಸಿನಿಮಾದ ಶೂಟಿಂಗ್ ಇದ್ದ ಕಾರಣದಿಂದಾಗಿ ಚಿಕಿತ್ಸೆಗೆ ಪಡೆಯಲು ಆಗಿರಲಿಲ್ಲ.
ಈಗ ಹೈದರಾಬಾದ್ನ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಯಶಸ್ವಿಯಾಗಿ ಭುಜದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಕೇರ್ ಆಸ್ಪತ್ರೆಯ ಡಾ.ರಘುವೀರ್ ರೆಡ್ಡಿ ಮತ್ತು ಡಾ.ಬಿ.ಎನ್. ಪ್ರಸಾದ್ ಅವರ ತಂಡವು ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದು, ಸದ್ಯ ಬಾಲಕೃಷ್ಣ ಅವರು ಆರೋಗ್ಯವಾಗಿದ್ದಾರೆ.
ಕೆಲ ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸಾರ್ಜ್ ಮಾಡುವುದಾಗಿ ತಿಳಿಸಲಾಗಿದೆ. ಕೆಲದಿನಗಳ ಹಿಂದೆ ಪುನೀತ್ ರಾಜಕುಮಾರ ನಿಧನರಾದಗ ಅಂತಿಮ ದರ್ಶನಕ್ಕೆ ಬಂದು ಅಪ್ಪು ಸಾವಿಗೆ ಕಂಬನಿಗೆರದಿದ್ದರು.