ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ (Karnataka Cabinet Reshuffle) ಕಾಂಗ್ರೆಸ್ ಹೈಕಮಾಂಡ್ (Congress High Command) ಗೆ ಬಿಟ್ಟ ವಿಚಾರ ಎಂದು ವಿಧಾನ ಪರಿಷತ್ ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ (Salim Ahmed) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆಯಾಗಲಿ, ಪುನರ್ ರಚನೆಯಾಗಲಿ ಆಗುವುದಿಲ್ಲ. ಇನ್ನೂ ಮೂರ್ನಾಲ್ಕು ರಾಜ್ಯಗಳ ಚುನಾವಣೆ ಇದೆ. ಹೀಗಾಗಿ ಸಂಪುಟ ಪುನರ್ ರಚನೆ ಅಸಾಧ್ಯ. ಸದ್ಯಕ್ಕಂತೂ ಸಂಪುಟ ವಿಸ್ತರಣೆ ಇಲ್ಲ. ಆದರೂ ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ದು ಹೇಳಿದ್ದಾರೆ.
ಎಷ್ಟು ದಿನ ನಾನು ಸಚಿವನಾಗಿ ಇರುತ್ತೇನೋ ಎಂಬ ಸಚಿವ ಜಮೀರ್ ಹೇಳಿಕೆ ನನಗೆ ಗೊತ್ತಿಲ್ಲ. ಅವರು ಯಾವ ವಿಚಾರದಲ್ಲಿ ಹೇಳಿದ್ದಾರೋ ಎಂಬುವುದು ತಿಳಿದಿಲ್ಲ ಎಂದು ಹೇಳಿದ್ದಾರೆ.