ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಮಹಾಮಾರಿ ಕೊರೊವಾ ವೈರಸ್ ಸಮುದಾಯದ ಹಂತದಲ್ಲಿ ಹಬ್ಬುತ್ತಿದೆಯಾ ಇಲ್ಲವೇ ಎಂಬುದರ ಬಗ್ಗೆ ಮೂರು ದಿನಗಳಲ್ಲಿ ತಜ್ಞರ ವರದಿ ಸರ್ಕಾರದ ಕೈಸೇರಲಿದೆ ಎಂದು ಕೋವಿಡ್-19 ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕೊರೊನಾ ಸಮುದಾಯಕ್ಕೆ ಹರಡಿದೆಯೇ ಇಲ್ಲವಾ ಎಂಬುದರ ಬಗ್ಗೆ ನಿನ್ನೆಯೇ ತಜ್ಞ ವೈದ್ಯರು ಸಿಎಂ ಯಡಿಯೂರಪ್ಪ ಜತೆ ಚರ್ಚಿಸಿದ್ದಾರೆ. ಇಡೀ ಬೆಂಗಳೂರಿನಲ್ಲಿ ಸರ್ವೆ ಮಾಡಿ ವರದಿ ಕೊಡುವಂತೆ ಸಿಎಂ ಸೂಚಿಸಿದ್ದಾರೆ. ಹೀಗಾಗಿ ಸರ್ವೆ ಕಾರ್ಯ ನಡೆದಿದ್ದು, ಮೂರು ದಿನದಲ್ಲಿ ವರದಿ ಬರಲಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದ ಬಳಿಕ ಮುಂದಿನ ಭಾನುವಾರದಿಂದ ಭಾನುವಾರ ಲಾಕ್‌ಡೌನ್, ರಾತ್ರಿ ಕರ್ಫ್ಯೂನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೊರೊನಾ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಯಾವುದೇ ಆದೇಶ ನೀಡಿಲ್ಲ. ಆದರೆ ಮೌಖಿತ ಸೂಚನೆ ನೀಡಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಕ್ವಾರಂಟೈನ್ ಇರುವವರಿಗೆ ಸೀಲ್ ಬದಲು ಟ್ಯಾಗ್…!
ಕೊರೊನಾ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ, ಅನ್ಯ ರಾಜ್ಯ, ವಿದೇಶಗಳಿಂದ ಬಂದವರನ್ನು ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಕ್ವಾರಂಟೈನ್‌ನಲ್ಲಿದ್ದವರು ಹೊರಗೆ ಹೋಗುವುದನ್ನು ತಪ್ಪಿಸಲು ಸೀಲ್ ಹಾಕುವ ಬದಲು ಇನ್ನು ಮುಂದೆ ಟ್ಯಾಗ್ ಹಾಕಲಾಗುವುದು. ಒಂದು ವೇಳೆ ಟ್ಯಾಗ್‌ನ್ನು ಕಿತ್ತು ಹಾಕಿದರೆ ಅಥವಾ ಕತ್ತರಿಸಿಕೊಂಡರೆ ಪೊಲೀಸರಿಗೆ ಸಿಗ್ನಲ್ ಬರುವಂತೆ ಮಾಡಲಾಗಿದೆ ಎಂದು ಸಚಿವ ಆರ್. ಅಶೋಕ್ ಮಾಹಿತಿ ನೀಡಿದರು.
ಮತ್ತೆ ಕ್ವಾರಂಟೈನ್ ರೂಲ್ಸ್ ಬದಲು
ಮಹಾರಾಷ್ಟçದಿಂದ ಬರುವವರಿಗೆ ವಿಧಿಸಲಾಗುತ್ತಿದ್ದ ಕ್ವಾರಂಟೈನ್ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ಪರಿಷ್ಕರಿಸಿದೆ.
ಮಹಾರಾಷ್ಟçದಿಂದ ಬರುವವರು ಕಡ್ಡಾಯವಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್‌ಗೆ ಒಳಗಾಗಲೇ ಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ.
ಮಹಾರಾಷ್ಟç ಹೊರತುಪಡಿಸಿ ಉಳಿದ ರಾಜ್ಯಗಳಿಂದ ಬರುವವರಿಗೆ 14ದಿನ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಆದೇಶದಲ್ಲಿ ತಿಳಿಸಿದೆ.








