ಇಂದು 73ನೇ ಗಣರಾಜ್ಯೋತ್ಸವ : ಬಿಜೆಪಿ ನಾಯಕರ ಶುಭಾಶಯ republic-day-2022 BJP leaders Greetings
ಬೆಂಗಳೂರು : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ವರ್ಷದಂತೆ ರಾಜಪಥ್ನಲ್ಲಿ ಪರೇಡ್ ಕಾರ್ಯಕ್ರಮ, ಸ್ತಬ್ಧಚಿತ್ರಗಳ ಮೆರವಣಿಗೆ, ವೈಮಾನಿಕ ಪ್ರದರ್ಶನ, 480 ನೃತ್ಯಗಾರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿವೆ.
ಇತ್ತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವಿಟ್ಟರ್ ನಲ್ಲಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತದ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ. ಈ ಮೂಲಕ ಸಧೃಢ ದೇಶ ನಿರ್ಮಿಸಲು ಕಾರ್ಯೋನ್ಮುಖರಾಗೋಣ. ನಾಡಿನ ಸಮಸ್ತ ಜನತೆಗೆ 73 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಶುಭಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ 73ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಕಾಮನೆಗಳು. ಭಾರತ ಸ್ವತಂತ್ರ ಗಣತಂತ್ರವಾದ ದಿನದ ಸಂಸ್ಮರಣೆಗಳ ಜೊತೆಗೆ ಸಂವಿಧಾನದ ಸುಭದ್ರ ಅಡಿಪಾಯದ ಮೇಲೆ ಸಶಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಭಾರತೀಯರು ಒಂದಾಗಿ ಮುನ್ನಡೆಯುವ ಸಂಕಲ್ಪ ಮಾಡೋಣ ಎಂದು ಮಾಜಿ ಸಿಎಂ ಮಾಜಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.