ಸಂವಿಧಾನ ವಿರೋಧಿ ನಡೆ-ನುಡಿಯ ವಿರುದ್ಧ ಹೋರಾಡೋಣ : ಸಿದ್ದರಾಮಯ್ಯ Republic Day 2022 congress leaders greetings
ಬೆಂಗಳೂರು : ಕೊರೊನಾ ಸೋಂಕಿನ ಮೂರನೇ ಅಲೆಯ ನಡುವೆ ಇಂದು ದೇಶದಾದ್ಯಂತ 73ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಮನೆ ಮಾಡಿದೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಪಥಚಲನೆ ಆರಂಭವಾಗಿದೆ.
ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ಟ್ವಿಟ್ಟರ್ ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ.. Republic Day 2022 congress leaders greetings
ಸಂವಿಧಾನಕ್ಕೆ ನಿಷ್ಠರಾಗಿ ಅದರ ಆಶಯಗಳನ್ನು ಸಾಕಾರಗೊಳಿಸುವ ಕರ್ತವ್ಯಕ್ಕೆ ನಮ್ಮನ್ನು ಅರ್ಪಿಸುವ ಮೂಲಕ ಗಣರಾಜ್ಯೋತ್ಸವದ ಆಚರಣೆಯನ್ನು ಸಂಭ್ರಮಿಸೋಣ. ಸಂವಿಧಾನ ವಿರೋಧಿ ನಡೆ-ನುಡಿಯ ವಿರುದ್ಧ ಹೋರಾಡೋಣ ಎಂದು ಕರೆಕೊಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣರಾಜ್ಯೋತ್ಸವವು ನಮ್ಮ ಸಂವಿಧಾನವನ್ನು ಆಚರಿಸಲು ಸೂಕ್ತ ಸಂದರ್ಭವಾಗಿದ್ದು ಅದು ನಮ್ಮ ದೇಶದಲ್ಲಿ ಆಡಳಿತದ ತತ್ವಗಳನ್ನು ಸೂಚಿಸುತ್ತದೆ. ಇಂದು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಪಾಯವಾದ ಸಂವಿಧಾನ ರಚಿಸಿದ ಧೀಮಂತ ನಾಯಕರನ್ನು ನಾವು ನೆನಪಿಸಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ.
1950 ಜನವರಿ 26ರಂದು ಭಾರತೀಯರಾದ ನಾವು,
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಲೋಕತಾಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ,
'ಭಾರತದ ಘನ ಸಂವಿಧಾನ'ವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಂಡ ಈ ದಿನದಂದು ನಾಡಿನ ಸಮಸ್ತ ಜನತೆಗೆ 'ಗಣರಾಜ್ಯೋತ್ಸವ'ದ ಶುಭಾಶಯಗಳು.#RepublicDay pic.twitter.com/A2VLsSoqOa
— Karnataka Congress (@INCKarnataka) January 26, 2022
ಇತ್ತ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ.. 1950 ಜನವರಿ 26ರಂದು ಭಾರತೀಯರಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಲೋಕತಾಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ‘ಭಾರತದ ಘನ ಸಂವಿಧಾನ’ವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಂಡ ಈ ದಿನದಂದು ನಾಡಿನ ಸಮಸ್ತ ಜನತೆಗೆ ‘ಗಣರಾಜ್ಯೋತ್ಸವ’ದ ಶುಭಾಶಯಗಳು ಎಂದು ಬರೆದುಕೊಂಡಿದೆ.