‘ರಿಪಬ್ಲಿಕ್’ CEO ವಿಕಾಸ್ ಗೆ ಬಿಗ್ ರಿಲೀಫ್ : ಜಾಮೀನು ಮಂಜೂರು..!
ಮುಂಬೈ : ಟಿ ಆರ್ ಪಿ ತಿರುಚಿದ ಪ್ರಕರಣ ಸಂಬಂಧ ಅರೆಸ್ಟ್ ಆಗಿದ್ದ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ನ ಸಿಇಒ ವಿಕಾಸ್ ಖನ್ಚಾಂದಾನಿ ಅವರಿಗೆ ಜಾಮೀನು ಮಂಜೂರಾಗಿದೆ. ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಭಾನುವಾರ ಬೆಳಗ್ಗೆ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ವಿಕಾಸ್ ನನ್ನ ಅರೆಸ್ಟ್ ಮಾಡಿದ 2 ದಿನಗಳ ಬಳಿಕ ಅವರಿಗೆ ಜಾಮೀನು ಸಿಕ್ಕಿದೆ. ಇನ್ನೂ ನಿನ್ನೆಯಷ್ಟೇ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದರ ಬೆನ್ನಲ್ಲೇ ಜಾಮೀನು ಸಿಕ್ಕಿದೆ. ಇಂದು ಸಂಜೆ ವಿಕಾಸ್ ರಿಲೀಸ್ ಆಗೋ ಸಾಧ್ಯತೆಯಿದೆ. ಇನ್ನೂ ಇತ್ತೀಚೆಗಷ್ಟೇ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ನ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ 26 ದಿನಗಳ ಕಾಲ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅದರ ಬೆನ್ನಲ್ಲೇ ವಿಕಾಸ್ ಸಹ ಬಂಧನವಾಗಿದ್ದರು. ಇದೀಗ ಅವರಿಗೂ ಬೇಲ್ ಸಿಕ್ಕಿದೆ.
ಕಣ್ವ ಗ್ರೂಪ್ ನ 426 ಕೋಟಿ ರೂ ಸ್ತಿರಾಸ್ಥಿ CID ವಶಕ್ಕೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel