ಗಾಂಧಿನಗರ: ಭಾರತ ಹಾಗೂ ಪಾಕಿಸ್ತಾನ ಸಮುದ್ರ ಗಡಿಯ ಮಧ್ಯೆ ಪಾಕಿಸ್ತಾನ (Pakistan) ಕರಾವಳಿ ಭದ್ರತಾ ಏಜೆನ್ಸಿ ವಶದಲ್ಲಿದ್ದ 7 ಜನ ಭಾರತೀಯ ಮೀನುಗಾರರನ್ನು ಗುಜರಾತ್ (Gujarat) ಕರಾವಳಿ ಕಾವಲು ಪಡೆ ರಕ್ಷಿಸಿದೆ.
ಭಾರತೀಯ ಮೀನುಗಾರರ ದೋಣಿ ಮೀನುಗಾರಿಕೆ ರಹಿತ ಪ್ರದೇಶದಲ್ಲಿ ಇರುವುದನ್ನು ಕಂಡ ಕರಾವಳಿ ಕಾವಲು ಪಡೆ ಸಮಸ್ಯೆಯ ಅರಿವಾಗಿ ನಂತರ ಅವರನ್ನು ರಕ್ಷಿಸಿದ್ದಾರೆ. ಮೀನುಗಾರರನ್ನು ಉಭಯ ದೇಶಗಳ ನಡುವಿನ ಸಮುದದ್ರ ಗಡಿಯ ಬಳಿ ಅವರ ಹಡಗಿನಲ್ಲಿ ಇರಿಸಲಾಗಿತ್ತು ಎಂದು ಭಾರತೀಯ ಕರಾವಳಿ ಕಾವಲು ಪಡೆ (IGC) ಹೇಳಿದೆ.
ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ಮೀನುಗಾರಿಕೆ ರಹಿತ ಪ್ರದೇಶದಲ್ಲಿ ಭಾರತೀಯ ಮೀನುಗಾರರ ದೋಣಿ ಕಂಡಿದೆ ಎನ್ನಲಾಗಿದೆ. ಏಳು ಮೀನುಗಾರರನ್ನು ಪಾಕಿಸ್ತಾನದ ಹಡಗಿನಿಂದ ಸುರಕ್ಷಿತವಾಗಿ ಹೊರತೆಗೆದಿದ್ದು, ಆರೋಗ್ಯವಾಗಿದ್ದಾರೆ. ಈ ಘಟನೆ ಭಾರತೀಯ ದೋಣಿ ಕಾಲ್ ಭೈರವ್ ಹಾನಿಗೊಳಗಾಗಿದ್ದು, ಮುಳುಗಿದೆ ಎನ್ನಲಾಗಿದೆ.








