ಮೀಸಲಾತಿ ನೀಡದಿದ್ರೆ ರಾಜೀನಾಮೆ ನೀಡಿ ಅನ್ನೋದು ತಪ್ಪು : ಬಿ.ಸಿ.ಪಾಟೀಲ್
ವಿಜಯಪುರ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡದಿದ್ದರೆ ಸಮಾಜದ ಸಚಿವರು, ವಿವಿಧ ನಿಗಮ, ಮಂಡಳಿ ನೇಮಕಗೊಂಡವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಾ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡದಿದ್ದರೆ ಸಮಾಜದ ಸಚಿವರು, ವಿವಿಧ ನಿಗಮ, ಮಂಡಳಿ ನೇಮಕಗೊಂಡವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರೆಕೊಟ್ಟರು.
ಈ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡದಿದ್ದರೆ ಸಮಾಜದ ಸಚಿವರು, ವಿವಿಧ ನಿಗಮ, ಮಂಡಳಿ ನೇಮಕಗೊಂಡವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ನಿಲುವುಗಳಿರುತ್ತವೆ. ರಾಜೀನಾಮೆ ನೀಡುವಂತೆ ಯಾರೂ ಬಲವಂತ ಮಾಡಲಾಗದು ಅಂತ ಹೇಳಿದರು.
ಇದೇ ವೇಳೆ ಯತ್ನಾಳ್ ದೆಹಲಿ ಭೇಟಿ ಬಗ್ಗೆ ಮಾತನಾಡಿ, ಯತ್ನಾಳ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಬಗ್ಗೆ ನನಗೆ ತಿಳಿದಿಲ್ಲ. ಸಮುದಾಯಗಳ ಮೀಸಲು ಹೋರಾಟದಲ್ಲಿ ಯತ್ನಾಳ್ ಮಾತ್ರವಲ್ಲ, ಆಯಾ ಸಮುದಾಯಗಳ ಹಲವು ನಾಯಕರೂ ಪಾಲ್ಗೊಂಡಿದ್ದಾರೆ ಎಂದರು.
