Revenge against the crab-ಬೀಜಿಂಗ್: ಈ ಪ್ರಪಂಚದಲ್ಲಿ ಮಕ್ಕಳಿಗೆ ಪೋಷಕರೆ ಪ್ರಪಂಚ ಆದರೆ ಅದರಲ್ಲೂ ಹೆಣ್ಣುಮಕ್ಕಳಿಗೆ ತಂದೆಯೇ ಪ್ರಪಂಚ ತಂದೆಗೂ ಹೆಣ್ಣು ಮಗುವಿನ ಮೇಲೆ ಅಪಾರ ಪ್ರೀತಿ, ತನ್ನ ಮಗಳಿಗೆ ಏನಾದರೂ ಸಹಿಸದ ತಂದೆ ನೋವು ಉಂಟು ಮಾಡಿದ್ದು ಯಾರೆಯಾದರೂ ಅವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ಈಗ ಯಾಕೆ ಇದನ್ನೆಲ್ಲ ಹೇಳುತಿದ್ದೆವೇ ಎಂದು ಯೋಚಿಸುತ್ತಿದರೇ ಈ ಘಟನೆಗೆ ಪುಷ್ಟಿ ನೀಡುವಂತೆ ಚೀನಾದ ಬೀಜಿಂಗನಲ್ಲಿ ಘಟನೆಯೊಂದು ನಡೆದಿದೆ.
ಹೌದು ತಂದೆಯೊಬ್ಬ ತನ್ನ ಮಗಳಿಗೆ ಗಾಯ ಮಾಡಿದ ಜಲಚರದ ವಿರುದ್ದ ಸೇಡು ತೀರಿಸಿಕೊಳ್ಳಲು ಹೋಗಿ ಅಪಾಯಕ್ಕಿಡಾಗಿದ್ದಾನೆ.
ಮಗಳಿಗೆ ಗಾಯ ಮಾಡಿದ್ದ ಏಡಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ತಂದೆ ಚೀನಾದ ಝೆಜಿಯಾಂಗ್ (39) ಆಸ್ಪತ್ರೆಗೆ ಸೇರಿದ್ದಾನೆ . ಇವನ ಮಗಳಿಗೆ ಏಡಿಯೊಂದು ಗಾಯ ಮಾಡಿತ್ತು. ಇದನ್ನು ತಿಳಿದು ಕೋಪಗೊಂಡ ಝೆಜಿಯಾಂಗ್ ಆ ಜೀವಂತ ಏಡಿಯನ್ನೆ ತಿಂದಿದ್ದಾನೆ.
ಇದರ ಪರಿಣಾಮವಾಗಿ 2 ತಿಂಗಳ ನಂತರ ಝೆಜಿಯಾಂಗ್ಗೆ ತೀವ್ರವಾದ ಬೆನ್ನುನೋವು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಧಾಖಲಿಸಲಾಗಿತ್ತು.
ಅಲರ್ಜಿಯಿಂದ ಈ ರೀತಿ ಆಗಿದೆ ಎಂದು ಝೆಜಿಯಾಂಗ್ನನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದರು. ಈ ಹಿಂದೆ ಏನನ್ನಾದರೂ ಸೇವಿಸಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ನಡೆದ ಘಟನೆಬಗ್ಗೆ ಹೇಳಲು ಹಿಂಜರಿದು ಏಡಿ ತಿಂದಿರುವ ಬಗ್ಗೆ ಹೇಳಿಕೊಳ್ಳಲ್ಲಿಲ್ಲ. ಆದರೆ ಆತನ ಪತ್ನಿನಡೆದ ವಿಷಯವನ್ನು ವೈದ್ಯರಿಗೆ ಹೇಳಿದ್ದಾಳೆ.
ನಂತರ ಬಳಿಕ ವ್ಯಕ್ತಿಯ ರಕ್ತ ಪರೀಕ್ಷೆಗೆ ಕಳುಹಿಸಿದ ವೈದರು ಸಮಸ್ಯೆಯನ್ನು ಕಂಡು ಸರಿಯಾದ ಚಿಕಿತ್ಸೆ ನೀಡಿ ವ್ಯಕ್ತಿಯನ್ನು ಮನೆಗೆಕಳುಹಿಸಿದ್ದಾರೆ.