Reverse Gear Auto Race : ಮಹಾರಾಷ್ಟ್ರದಲ್ಲಿ ‘ರಿವರ್ಸ್ ಗೇರ್ ಆಟೋ ರೇಸ್’ ….
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆಟೋ ರೇಸ್ ನಡೆಸಲಾಯಿತು. ಇದು ಅಂತಿಂಥಹ ಆಟೋ ರೇಸ್ ಅಲ್ಲ. ಇದು ರೋಮಾಂಚನಗೊಳಿಸುವಂತಹ ಆಟೋ ರೇಸ್…. ಸಮಾನ್ಯವಾಗಿ ವಾಹನಗಳ ರೇಸ್ ನಲ್ಲಿ ಅತಿವೇಗವಾಗಿ ರೇಸ್ ಓಡಿಸುವುದನ್ನ ನೀವು ನೋಡಿರುತ್ತೀರಿ. ಇದು ಕೂಡ ವೇಗವಾಗಿ ಆಟೋ ಓಡಿಸುವ ರೇಸ್ ಆದರೇ ರಿವರ್ಸ್ ಗೇರ್ ನಲ್ಲಿ ಹಿಮ್ಮುಖವಾಗಿ ಆಟೋ ಓಡಿಸುವ ಸ್ಪರ್ದೆ.
ಮಹಾರಾಷ್ಟ್ರದ ಸಂಗಮೇಶ್ವರ ಯಾತ್ರೆಯ ಸಂದರ್ಭದಲ್ಲಿ ಸಾಂಗ್ಲಿ ನಗರದ ಸಮೀಪದ ಹರಿಪುರ ಗ್ರಾಮದಲ್ಲಿ ‘ರಿವರ್ಸ್ ಆಟೋ ರಿಕ್ಷಾ ಚಾಲನೆ ಸ್ಪರ್ಧೆ’ ನಡೆಯಿತು. ರಿವರ್ಸ್ ಗೇರ್ ನಲ್ಲಿ ಅತಿವೇಗವಾಗಿ ಆಟೋ ಓಡಿಸಿದ ಚಾಲಕರನ್ನು ಪ್ರೇಕ್ಷಕರು ಶಿಳ್ಳೆ ಕೇಕೇ ಹಾಕಿ ಹುರಿದುಂಬಿಸಿದರು.
ಈ ರಿವರ್ಸ್ ಗೇರ್ ಆಟೋ ರೇಸ್ ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಜನಸಾಗರವೇ ಹರಿದು ಬಂದಿತ್ತು. ಫೋಟೊ, ವಿಡಿಯೋ ತೆಗೆಯುವ ಮೂಲಕ ಸದ್ದು ಮಾಡಿದರು. ಈ ರಿವರ್ಸ್ ಗೇರ್ ಆಟೋ ರೇಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Reverse Gear Auto Race: ‘Reverse Gear Auto Race’ in Maharashtra…








