ಪಬ್ ನಲ್ಲಿ ರಾಮ್ ಗೋಪಾಲ್ ವರ್ಮಾ ಜುಮ್ ಜುಮ್ಮಾಯ..! rgv-heroine-inaya-sulthana-pub-video
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಪಬ್ ಒಂದರಲ್ಲಿ ಹುಡುಗಿಯರೊಂದಿಗೆ ಡ್ರಿಕ್ಸ್ ಮಾಡುತ್ತಾ ಡ್ಯಾನ್ಸ್ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ತಾನೇ ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಪಬ್ಲಿಕ್ ಆಗಿ ಸಿಗರೇಟು ಎಳೆಯುತ್ತಾ ನಟಿ ಇನಯಾ ಸುಲ್ತಾನ್ ಗೆ ಕಿಸ್ ಮಾಡಿದ್ದಾರೆ. ಸಿಗರೇಟ್ ಎಳೆಯುತ್ತಾ, ಡ್ರಿಂಕ್ಸ್ ಮಾಡುತ್ತಾ, ಇನಯಾಗೆ ಕಿಸ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.
ವರ್ಮಾ ಶೇರ್ ಮಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಈ ಹಿಂದೆ ಇನಯಾ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ವರ್ಮಾ, ಕುಡಿದು ಕುಳಿದು ಕುಪ್ಪಳಿಸಿದ್ದರು. ಈ ವಿಡಿಯೋ ಕೂಡ ಸೊಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.