Rishabh Pant | ಪಂತ್ ಕ್ಯಾಪ್ಟನ್ಸಿ ಬಗ್ಗೆ ಪಾಂಟಿಂಗ್ ಹೇಳಿದ್ದೇನು..?
‘‘ದೆಹಲಿ ಕ್ಯಾಪಿಟಲ್ಸ್ ನಾಯಕತ್ವಕ್ಕೆ ರಿಷಬ್ ಪಂತ್ ಸರಿಯಾದ ಆಯ್ಕೆಯಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಕಳೆದ ಸೀಸನ್ .. ಈಗಲೂ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಗಾಯದ ಕಾರಣ ಶ್ರೇಯಸ್ ಅಯ್ಯರ್ ಅವರಿಂದ ನಾಯಕತ್ವವನ್ನು ವಹಿಸಿಕೊಂಡ ನಂತರ, ಪಂತ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ರಿಷಬ್ ಪಂತ್ ಅವರನ್ನು ಬೆಂಬಲಿಸಿದ್ದಾರೆ.

ಪಂತ್ ಇನ್ನೂ ಚಿಕ್ಕವಯಸ್ಸಿನವನು, ಆದ್ರೂ ಐಪಿಎಲ್ ನಂತಹ ದೊಡ್ಡ ಲೀಗ್ ನಲ್ಲಿ ಒತ್ತಡವನ್ನು ಸಹಿಸಿಕೊಂಡು ಮುಂದೆ ನಡೆಯುತ್ತಿರುವ ರೀತಿ ಅದ್ಭತವಾಗಿದೆ. ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ, ಪಂತ್ ಇನ್ನೂ ಕಲಿಕೆಯ ಹಂತದಲ್ಲಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.
ಮುಂಬೈ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ರಿಕಿ ಪಾಂಟಿಂಗ್, “ಪಂತ್ ಇನ್ನೂ ಚಿಕ್ಕ ಹುಡುಗ … ನಾಯಕನಾಗಿ ಕಲಿಯುವುದು ತುಂಬಾ ಇದೆ. ಅದರಲ್ಲೂ ಟಿ20 ನಾಯಕನಾಗಿ ಐಪಿಎಲ್‌ನಂತಹ ಪ್ರಮುಖ ಲೀಗ್‌ನಲ್ಲಿ ಒತ್ತಡವನ್ನು ಸಹಿಸಿಕೊಳ್ಳುವುದು ಸಾಮಾನ್ಯ ಸಂಗತಿಯೇನಲ್ಲ. ಪಂದ್ಯದಲ್ಲಿ ಸೋಲು ಗೆಲುವು ಸಹಜ, ಡೆಲ್ಲಿ ಸೋಲಿಗೆ ಪಂತ್ ಅವರನ್ನು ದೂಷಿಸುವ ಅಗತ್ಯವಿಲ್ಲ ಎಂದರು. ricky-ponting-supports-rishabh