ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸಲು ಕಾನೂನಿನಲ್ಲಿ ಅನುಮತಿ ಇದೆ – ಅಲಹಾಬಾದ್ ಹೈಕೋರ್ಟ್ two adults live together
ಅಲಹಾಬಾದ್, ನವೆಂಬರ್25: ಲವ್ ಜಿಹಾದ್ ಕುರಿತು ತೀವ್ರ ಚರ್ಚೆಯ ಮಧ್ಯೆ, ಅಲಹಾಬಾದ್ ಹೈಕೋರ್ಟ್ ಮಂಗಳವಾರ ತನ್ನದೇ ಆದ ತೀರ್ಪನ್ನು ತಳ್ಳಿಹಾಕಿದೆ. ಅದರಲ್ಲಿ ಧಾರ್ಮಿಕ ಮತಾಂತರವು ಕೇವಲ ವಿವಾಹದ ಉದ್ದೇಶಕ್ಕಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು. two adults live together
ಕುಶಿನಗರ ಜಿಲ್ಲೆಯ ನಿವಾಸಿಗಳಾದ ಸಲಾಮತ್ ಅನ್ಸಾರಿ ಮತ್ತು ಪ್ರಿಯಾಂಕಾ ಖಾರ್ವಾರ್ ಎ.ಕೆ.ಅಲಿಯಾ ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ, ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವ ಹಕ್ಕನ್ನು ರಾಜ್ಯ ಅಥವಾ ಇತರರು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ನಮಗೆ ಪ್ರಿಯಾಂಕಾ ಖಾರ್ವಾರ್ ಮತ್ತು ಸಲಾಮತ್ ಅನ್ಸಾರಿ ಹಿಂದೂ ಮತ್ತು ಮುಸ್ಲಿಂ ವಯಸ್ಕ ವ್ಯಕ್ತಿಗಳಾಗಿ ಕಾಣುವುದಿಲ್ಲ. ಪ್ರಾಪ್ತ ವಯಸ್ಸಿನ ವ್ಯಕ್ತಿಯ ಆಯ್ಕೆಯನ್ನು ಕಡೆಗಣಿಸುವುದು ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುವುದು. ಇದು ವೈವಿಧ್ಯತೆಯಲ್ಲಿ ಏಕತೆಯ ಪರಿಕಲ್ಪನೆಗೆ ಬೆದರಿಕೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ಪಂಕಜ್ ನಖ್ವಿ ಮತ್ತು ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರನ್ನೊಳಗೊಂಡ ನ್ಯಾಯಪೀಠ, ವೈಯಕ್ತಿಕ ಸಂಬಂಧದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಆಯ್ಕೆಯ ಸ್ವಾತಂತ್ರ್ಯದ ಹಕ್ಕಿನ ಮೇಲೆ ಗಂಭೀರವಾದ ಅತಿಕ್ರಮಣ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಒಂದೇ ಲಿಂಗದ ಇಬ್ಬರು ವ್ಯಕ್ತಿಗಳು ಶಾಂತಿಯುತವಾಗಿ ಒಟ್ಟಿಗೆ ವಾಸಿಸಲು ಕಾನೂನು ಅನುಮತಿಸುವಾಗ ವಯಸ್ಸಿಗೆ ಬಂದ ಯಾವುದೇ ಇಬ್ಬರು ವ್ಯಕ್ತಿಗಳು ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಒಟ್ಟಿಗೆ ಬಾಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ತೀರ್ಪು ಹೇಳಿದೆ.
ಅವರಿಬ್ಬರ ಶಾಂತಿಯುವ ಬದುಕಿಗೆ ಬೇರಾವುದೇ ವ್ಯಕ್ತಿ ಅಥವಾ ಕುಟುಂಬ ಅಥವಾ ರಾಜ್ಯದಿಂದ ತೊಂದರೆ ಆಗಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಮುಸ್ಲಿಂ ಮಹಿಳೆ ಮತ್ತು ಹಿಂದೂ ಪುರುಷನ ನಡುವಿನ ‘ಲವ್ ಜಿಹಾದ್’ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ಯೋಜಿಸುತ್ತಿರುವುದರಿಂದ ಈ ತೀರ್ಪು ಮಹತ್ವ ಪಡೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಫ್ಲೂ ನಿಂದ ದೂರವಿರಲು 8 ಸೂಪರ್ ಪವರ್ಫುಲ್ ಆಹಾರಗಳು https://t.co/SeuQxOPseK
— Saaksha TV (@SaakshaTv) November 24, 2020
ಆಯುಷ್ಮಾನ್ ಭವ – ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರಿಂದ ಸಾಕ್ಷಾಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯೋಗಾಸನದ ಬಗ್ಗೆ ಮಾಹಿತಿ #yoga#Kannada#yogateacherhttps://t.co/pRB58lu6J7
— Saaksha TV (@SaakshaTv) November 25, 2020