ವಾಷಿಂಗ್ಟನ್: ಅಮೆರಿಕದ ಚುನಾವಣೆ (US Election)ಗೆ ದಿನಗಣನೆ ಆರಂಭವಾಗಿದ್ದು, ಇಡೀ ವಿಶ್ವವೇ ಅಮೆರಿಕದತ್ತ ದೃಷ್ಟಿ ನೆಟ್ಟಿದೆ. ಹೀಗಾಗಿ ಅಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಬೆಟ್ಟಿಂಗ್ ಕೂಡ ಹಿಂದೆ ಬಿದ್ದಿಲ್ಲ.
ಈಗ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ (Betting Market) ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಟಾಪ್ ನಲ್ಲಿದ್ದಾರೆ.
ಕೆಲವು ಸಮೀಕ್ಷೆಗಳು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಬಿರುಸಿನ ಸ್ಪರ್ಧೆ ಇದೆ ಎಂದು ತೋರಿಸುತ್ತಿದ್ದರೂ, ಕ್ರಿಪ್ಟೋ ಆಧಾರಿತ ಪಾಲಿಮಾರ್ಕೆಟ್ ಪ್ರಕಾರ ಟ್ರಂಪ್ ಶೇ. 60ರಷ್ಟು ಗೆಲ್ಲುವ ಅವಕಾಶ ಹೊಂದಿದ್ದಾರೆ.
ನವೆಂಬರ್ 5 ರಂದು ಚುನಾವಣೆ ನಡೆಯಲಿದ್ದು ಅಮೆರಿಕದ ಮಾಧ್ಯಮಗಳು ನಡೆಸುವ ಬಹುತೇಕ ಸಮೀಕ್ಷೆಯಲ್ಲಿ ಇಬ್ಬರ ಗ್ರಾಫ್ ಏರಿಳಿತವಾಗುತ್ತಿದೆ.