ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ ಸೇತುವೆ – RIMS MANPOWER SOLUTIONS ಸಂಸ್ಥೆಗೆ 20 ನೇ ವಾರ್ಷಿಕೋತ್ಸವ…
ಇದೀಗ ಸ್ಪರ್ಧಾತ್ಮಕಾ ಪ್ರಪಂಚ. ಜೀವನವನ್ನ ಕಟ್ಟಿಕೊಳ್ಳಲು ಯುವ ಜನತೆ ಸ್ಪರ್ದೆಗಿಳಿದರೆ, ಉತ್ತಮ ಕೌಶಲ್ಯಯುಕ್ತ ಕೆಲಸಗಾರರನ್ನ ಆಯ್ಕೆ ಮಾಡಿಕೊಳ್ಳಲು ಉದ್ಯೋಗದಾತರು ಹುಡುಕುತ್ತಿರುತ್ತಾರೆ. ಇಂಥಹ ಹತ್ತು ಹಲವು ಅವಕಾಶಗಳನ್ನ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಒದಗಿಸುತ್ತಿರುವ ಸಂಸ್ಥೆ RIMS MANPOWER SOLUTIONS.
ಕಳೆದ 20 ವರ್ಷಗಳಿಂದ ನೂರಾರು ಕಂಪನಿಗೆ ಮಾನವ ಸಂಪನ್ಮೂಲವನ್ನ ಒದಗಿಸುತ್ತಿರುವ, ಈ ಮೂಲಕ ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ಒದಗಿಸುವ RIMS ಮ್ಯಾನ್ ಪವರ್ ಕಂಪನಿ ಇಂದು 20 ವರ್ಷದ ವಾರ್ಷಿಕೋತ್ಸವವನ್ನ ಆಚರಿಕೊಳ್ಳುತ್ತಿದೆ.
ಕಂಪನಿಯ ಹುದ್ದೆಗಳಿಗೆ ತಕ್ಕಂತೆ ಮ್ಯಾನ್ ಪವರ್ ಒದಗಿಸುವ ಮೂಲಕ ಸಾವಿರಾರು ಕಟುಂಬಗಳ ಪಾಲಿಗೆ ಬೆಳಕಾರುವ RIMS ಸಂಸ್ಥೆ ತನ್ನ 20 ನೇ ವರ್ಷದ ವಾರ್ಷಿಕೋತ್ಸವವನ್ನು ಜಯನಗರದ ಹೋಟೆಲ್ ಪೈ ವೈಸರಾಯ್ ನಲ್ಲಿ ಸಂಭ್ರಮದಿಂದ ಆಚರಿಸಿತು.
ಬೆಳಿಗ್ಗೆ ಸಂಸ್ಥೆಯ ಕಾರ್ಯಾಲಯದಲ್ಲಿ ಪದಾದಿಕಾರಿಗಳು ಹಾಗೂ ನೌಕರರು ಸೇರಿ ಶ್ರೀಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡು ಸಭಾ ಕಾರ್ಯಕ್ರಮ ಹೊಟೇಲ್ ಪೈ ವೈಸರಾಯ್ ನಲ್ಲಿ ಸಮಾಪನಗೊಂಡಿತು.
ಈ ಕಾರ್ಯಕ್ರಮಕ್ಕೆ RIMS ಸಂಸ್ಥೆಯು ಕಾರ್ಯನಿರ್ವಹಿಸುವ , ಸಹಕಾರ ನೀಡುವ ಸಂಸ್ಥೆಗಳಾದ… ಟಾಟಾ ಪವರ್ ಸೊಲ್ಯೂಷನ್ಸ್, ಐ ಟಿ ಸಿ ಕಂಪನಿ, ಮೈಕ್ರೋ ಪ್ಲಾಸ್ಟಿಕ್ ಪ್ರೈ. ಲಿ.. IKA INDIA OPERATIONS. METRO CASH AND CARRY ON ಸೇರಿದಂತೆ ಹತ್ತು ಹಲವು ಸಂಸ್ಥೆಗಳು ಭಾಗವಹಿಸಿದ್ದವು. RIMS ಸಂಸ್ಥೆಯ ಬಗ್ಗೆ ಹಾಗೂ ಅದರ ಕಾರ್ಯವೈಖರಿ ಬಗ್ಗೆ ಮಾತನಾಡಿ ಶುಭಕೋರಿದರು.
RIMS ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್ ಕೃಷ್ಣಗಿರಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಪ್ರಗತಿಗೆ ಸಹಕರಿಸಿದ ಸಂಸ್ಥೆಗಳಿಗೆ, ಅದರ ಅಧಿಕಾರಿಗಳಿಗೆ ಹಾಗೂ ಸಂಸ್ಥೆಯ ನೌಕರರ ವರ್ಗಕ್ಕೂ ಮತ್ತು ಸ್ನೇಹಿತರು, ಕುಟುಂಬದವರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು. ಶ್ರೀ ವಿನಯ್ ರಾಘವ್ ರವರ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ ಸಂಸ್ಥೆಯ ನಿರ್ದೇಶಕಿಯಾದ ಶ್ರೀಮತಿ ಭಾರತಿ ಶ್ರೀನಿವಾಸ್ ರವರು ಎಲ್ಲರಿಗೂ ವಂದನೆಗಳನ್ನ ತಿಳಿಸುವ ಮೂಲಕ ಮುಕ್ತಾಯವಾಯಿತು.
RIMS MANPOWER SOLUTIONS (INDIA) PVT LTD.,
A bridge between the employee and the employer – RIMS MANPOWER SOLUTIONS celebrates its 20th anniversary…