ಬರೆದಿಟ್ಟುಕೊಳ್ಳಿ ಈತನೇ ಟೀಂ ಇಂಡಿಯಾದ ಮುಂದಿನ ನಾಯಕ : ಸಿಕ್ಸರ್ ಸಿಂಗ್ ಸ್ಫೋಟಕ ಭವಿಷ್ಯ

1 min read
Rishabh Pant

ಬರೆದಿಟ್ಟುಕೊಳ್ಳಿ ಈತನೇ ಟೀಂ ಇಂಡಿಯಾದ ಮುಂದಿನ ನಾಯಕ

ಸಿಕ್ಸರ್ ಸಿಂಗ್ ಸ್ಫೋಟಕ ಭವಿಷ್ಯ

ನವದೆಹಲಿ : ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾದ ನಾಯಕ ಯಾರು..? ಎಂಬ ಪ್ರಶ್ನೆ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇದಕ್ಕೆ ಉತ್ತರವಾಗಿ ಸಾಕಷ್ಟು ಯುವ ಆಟಗಾರರ ಹೆಸರುಗಳು ಕೇಳಿಬರುತ್ತವೆ. ಮುಖ್ಯವಾಗಿ ಕನ್ನಡಿಗ ಕೆ.ಎಲ್.ರಾಹುಲ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಹೆಸರುಗಳನ್ನು ಹಿರಿಯ ಆಟಗಾರರು ಹೇಳುತ್ತಲೇ ಇರುತ್ತಾರೆ.

ಇದೀಗ ಭಾರತ ತಂಡದ ಭವಿಷ್ಯದ ನಾಯಕತ್ವದ ಬಗ್ಗೆ ಮಾಜಿ ಸ್ಫೋಟಕ ಬ್ಯಾಟ್ಸ್‍ಮನ್ ಯುವರಾಜ್ ಸಿಂಗ್ ಮಾತನಾಡಿದ್ದು, ರಿಷಬ್ ಪಂತ್ ಪರ ಬ್ಯಾಟ್ ಬೀಸಿದ್ದಾರೆ.

ಹೌದು..! ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿರುವ ರಿಷಭ್ ಪಂತ್, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ನಾಯಕನಾಗಲಿದ್ದಾರೆ ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ. ಐಪಿಎಲ್ ನಲ್ಲಿ ಪಂತ್ ನಾಯಕತ್ವವನ್ನು ಯುವಿ ಶ್ಲಾಘಿಸಿದ್ದು, ಆತನಿಗೆ ಟೀಮ್ ಇಂಡಿಯಾದ ನಾಯಕನಾಗುವ ಸಾಮಥ್ರ್ಯ ಇದೆ ಎಂದಿದ್ದಾರೆ.

Rishabh Pant

ಅಲ್ಲದೆ ಪಂತ್ ಬ್ಯಾಟಿಂಗ್ ಹಾಗೂ ಕೀಪಿಂಗ್ ನ್ನು ಯುವರಾಜ್ ಸಿಂಗ್, ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಆಡಮ್ ಗಿಲ್‍ಕ್ರಿಸ್ಟ್‍ಗೆ ಹೋಲಿಸಿದ್ದಾರೆ. ಇನ್ನು ಪಂತ್ ಯಾವುದೇ ಸಮಯದಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಬ್ಯಾಟ್ಸ್ ಮನ್. ವಿಕೆಟ್‍ಕೀಪಿಂಗ್ ನಲ್ಲೂ ಉತ್ತಮ ಸಾಮಥ್ರ್ಯ ಹೊಂದಿದ್ದಾರೆ. ಪಂತ್ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್ ಆಗಿ ಟೀಮ್ ಇಂಡಿಯಾದ ಶಕ್ತಿಯಾಗಿದ್ದಾರೆ. ಪಂತ್ ಅವರ ಆಟ ಆಡಮ್ ಗಿಲ್ ಕ್ರಿಸ್ಟ್ ಬ್ಯಾಟಿಂಗ್ ನ್ನು ನೆನಪಿಸುತ್ತದೆ ಎಂದಿದ್ದಾರೆ.

ಇನ್ನು ಭಾರತಕ್ಕೆ ಭವಿಷ್ಯದಲ್ಲಿ ನಾಯಕನಾಗುವ ಸಾಮಥ್ರ್ಯ ರಿಷಭ್ ಪಂತ್‍ನಲ್ಲೂ ಇರುವುದನ್ನು ನಾನು ನೋಡುತ್ತಿದ್ದೇನೆ. ಯಾಕೆಂದರೆ ಆತ ಜಿಗಿದಾಡುತ್ತಾನೆ, ಚಿಯರ್ ಮಾಡ್ತಾನೆ, ಸುತ್ತಮುತ್ತ ಮಾತನಾಡುತ್ತಿರುತ್ತಾನೆ. ಅಷ್ಟೇ ಅಲ್ಲ, ಆತನಿಗೆ ಚತುರ ತಲೆ ಇರುವುದನ್ನು ನಾನು ಐಪಿಎಲ್‍ನಲ್ಲಿ ಆತ ಡೆಲ್ಲಿ ಕ್ಯಾಪಿಟಲ್ಸ್‍ಗೆ ಕ್ಯಾಪ್ಟನ್ಸಿ ಮಾಡುವಾಗ ನೋಡಿದ್ದೇನೆ,” ಎಂದು ಯುವರಾಜ್ ಸಿಂಗ್ ಪಂತ್ ಅವರನ್ನು ಕೊಂಡಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd