Rishabh Pant : ಐಪಿಎಲ್ ಆಡದಿದ್ರೂ ಪಂತ್ ಗೆ ಸಿಗುತ್ತೆ 21 ಕೋಟಿ ರೂ…
ಕಾರು ಅಪಘಾತದಲ್ಲಿ ಗಾಯಗೊಂಡು ಮುಂಬೈನಲ್ಲಿ ಶಸ್ತ್ರಿಚಿಕಿತ್ಸಗೆ ಗುರಿಯಾಗಿರುವ ರಿಷಭ್ 16ನೇ ಆವೃತ್ತಿಯ ಐಪಿಎಲ್ ಆಡದಿದ್ದರೂ 16 ಕೋಟಿ.ರೂ.ಪೂರ್ತಿ ವೇತನ ಸಿಗಲಿದೆ. ಜೊತೆಗೆ ಬಿಸಿಸಿಐ ಗುತ್ತಿಗೆಯ 5 ಕೋಟಿ.ರೂ.ವೇತನ ಸಿಗಲಿದೆ.
ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿರುವ ಎಲ್ಲಾ ಆಟಗಾರರು ವಿಮೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಬಿಸಿಸಿಐ ನಿಯಮಗಳ ಪ್ರಕಾರ ಆಟಗಾರರು ಗಾಯಗೊಂಡು ಐಪಿಎಲ್ನಿಂದ ಹಿಂದೆ ಸರಿದರೆ. ಆ ಮೊತ್ತವನ್ನು ವಿಮಾ ಕಂಪನಿಯು ನೀಡಬೇಕು.
ಗಾಯದ ಕಾರಣದಿಂದ ಪಂತ್ ಈ ಬಾರಿಯ ಐಪಿಎಲ್ಗೆ ಗೈರಾದರೂ ಅವರಿಗೆ ಫ್ರಾಂಚೈಸಿ ಘೋಷಿಸಿರುವ ಪೂರ್ತಿ ವೇತನ ಸಿಗಲಿದೆ. ಮೂಲಗಳ ಪ್ರಕಾರ ಪಂತ್ ಇನ್ನು 6 ತಿಂಗಳು ಮೈದಾನಕ್ಕಿಳಿಯುವುದಿಲ್ಲ.
ಮುಂದಿನ ಏಕದಿನ ವಿಶ್ವಕಪ್ ಆಡದಿದ್ದರೂ ಅಚ್ಚರಿಪಡಬೇಕಿಲ್ಲ. ಅದನ್ನು ವಿಮಾ ಕಂಪನಿಯೇ ಪಂತ್ಗೆ ಪೂರೈಸಲಿದೆ. ಬಿಸಿಸಿಐ ಗುತ್ತಿಗೆ ಹಣ ಪಾವತಿಸುವ ಜತೆಗೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆ.
Rishabh Pant: Even if he doesn’t play IPL, Pant will get Rs 21 crore…








