ಐಪಿಎಲ್ 2025 ಮೆಗಾ ಹರಾಜು ಆರಂಭವಾಗಿದ್ದು, ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸಮನ್ ರಿಷಬ್ ಪಂತ್ 27 ಕೋಟಿ ರೂ.ಗೆ ಹರಾಜಾಗಿದ್ದಾರೆ.
ಅವರು ಬರೋಬ್ಬರಿ 27 ಕೋಟಿಗೆ ಲಕ್ನೋ ಸೂಪರ್‌ಜೈಂಟ್ಸ್ ಪಾಲಾಗಿದ್ದಾರೆ. ರಿಷಬ್ ಗಾಗಿ ಲಕ್ನೋ ಫ್ರಾಂಚೈಸಿ ಮೊದಲು ಬಿಡ್ ಮಾಡಿತು. ನಂತರ ಆರ್‌ಸಿಬಿ, ಎಸ್‌ಆರ್‌ಹೆಚ್ ಬಿಡ್ ಮಾಡಲು ಆರಂಭಿಸಿದವು. 20.75 ಕೋಟಿಗೆ ಲಕ್ನೋ ಬಿಡ್ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಬಳಸುವುದಾಗಿ ಹೇಳಿತು. ಹೀಗಾಗಿ ಮತ್ತೆ ದರ ಏರಿಕೆಯಾಯಿತು. ಕೊನೆಗೆ ಎಲ್‌ಎಸ್‌ಜಿ ಬಿಡ್ ಮೊತ್ತವನ್ನು 27 ಕೋಟಿಗೆ ಏರಿಸಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು. ಹೀಗಾಗಿ ಪಂತ್ ದಾಖಲೆ ಮೊತ್ತಕ್ಕೆ ಲಕ್ನೋ ಪಾಲಾದರು.








